ಕರ್ನಾಟಕ

karnataka

ETV Bharat / bharat

ಸಹೋದರ ಸುಶಾಂತ್​ ಸಿಂಗ್​ ಸಾವಿನ ಕಾರಣ ತಿಳಿಯಲು ‘ತಾಳ್ಮೆ’ಯಿಂದ ನೋವು ತೋಡಿಕೊಂಡ ಸಹೋದರಿ!

ತನ್ನ ಸಹೋದರ ನಾವಿನ ತನಿಖೆ ಬಗ್ಗೆ ತಿಳಿಯಲು ತಾಳ್ಮೇ ಮೇಲೆ ಕವಿತೆ ಬರೆದು ಶ್ವೇತಾ ಸಿಂಗ್​ ತಮ್ಮ ನೋವನ್ನು ಬಹಿರಂಗ ಪಡಿಸಿದ್ದಾರೆ.

Sushant Singh Rajput, Sushant Singh Rajput sister Shweta, Sushant Singh Rajput sister Shweta tweet, TruthAboutSushant, TruthAboutSushant news, Sushant Singh Rajput news, Sushant Singh Rajput death case news, ಸುಶಾಂತ್​ ಸಿಂಗ್​ ರಜಪೂತ್​, ಸುಶಾಂತ್​ ಸಿಂಗ್​ ರಜಪೂತ್ ಸಹೋದರಿ ಶ್ವೇತಾ, ಸುಶಾಂತ್​ ಸಿಂಗ್​ ರಜಪೂತ್ ಸಹೋದರಿ ಶ್ವೇತಾ ಸುದ್ದಿ, ಸುಶಾಂತ್​ ಸಿಂಗ್​ ರಜಪೂತ್ ಸಹೋದರಿ ಶ್ವೇತಾ ಟ್ವೀಟ್​, ಸುಶಾಂತ್​ ಸಿಂಗ್​ ರಜಪೂತ್ ಪ್ರಕರಣ, ಸುಶಾಂತ್​ ಸಿಂಗ್​ ರಜಪೂತ್ ಆತ್ಮಹತ್ಯೆ ಪ್ರಕರಣ,
ಸಂಗ್ರಹ ಚಿತ್ರ

By

Published : Mar 4, 2021, 8:21 AM IST

ಕ್ಯಾಲಿಫೋರ್ನಿಯಾ: ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ತನ್ನ ಸಹೋದರ ಪ್ರಕರಣದಲ್ಲಿ ತಾಳ್ಮೆ ಪ್ರದರ್ಶಿಸಿ, ಸಾಮಾಜಿಕ ಜಾಲತಾಣದಲ್ಲಿ ಕವಿತೆ ಬರೆದಿದ್ದಾರೆ.

ಸಂಗ್ರಹ ಚಿತ್ರ

ಸಹೋದರ ಸುಶಾಂತ್​ ಸಾವಿನ ಹಿಂದಿನ ರಹಸ್ಯವನ್ನು ಬಗೆಹರಿಸಲು ನಮ್ಮ ಕುಟುಂಬ ಕಾಯುತ್ತಿದೆ. ತಾಳ್ಮೆಯ ಅಕ್ಷರಶಃ ಅರ್ಥ ಕೋಪ ಅಥವಾ ಅಸಮಾಧಾನ, ತೊಂದರೆ ಅಥವಾ ಸಂಕಟಗಳನ್ನು ಸ್ವೀಕರಿಸುವ ಅಥವಾ ಸಹಿಸಿಕೊಳ್ಳುವ ಸಾಮರ್ಥ್ಯ ಎಂದು ಬರೆದಿದ್ದಾರೆ. ನಾವು ನಿಸಹಾಯಕರಾಗಿದ್ದೇವೆ #TruthAboutSushant ಎಂದು ಶ್ವೇತಾ ಟ್ವಿಟರ್​ನಲ್ಲಿ ಬರೆದಿದ್ದಾರೆ.

ಕ್ಯಾಲಿಫೋರ್ನಿಯಾ ಮೂಲದ ಡಿಸೈನರ್ ಶ್ವೇತಾ ತನ್ನ ದಿವಂಗತ ಸಹೋದರನ ಸಾವಿಗೆ ಕಾರಣಗಳನ್ನು ಕಂಡುಕೊಳ್ಳವ ಪ್ರಯತ್ನದಲ್ಲಿರುವಾಗ ತಮ್ಮ ನೋವನ್ನು ಕವಿತೆ ಮೂಲಕ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್​​​ ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ತನಿಖೆ ಕಾರ್ಯವನ್ನು ಒಂದೆರಡು ತಿಂಗಳ ನಂತರ ಕೇಂದ್ರ ತನಿಖಾ ದಳಕ್ಕೆ ವಹಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಪ್ರಕರಣದ ಕುರಿತು ಹೆಚ್ಚು ಮಾಹಿತಿ ಬಹಿರಂಗವಾಗಿಲ್ಲ. 34 ವರ್ಷದ ನಟ ಕಳೆದ ವರ್ಷ ಜೂನ್‌ನಲ್ಲಿ ಅಂದ್ರೆ ಒಂಬತ್ತು ತಿಂಗಳ ಹಿಂದೆ ತನ್ನ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ.

ABOUT THE AUTHOR

...view details