ತಿರುವನಂತಪುರಂ :ವಿಧಾನಸಭಾ ಚುನಾವಣೆ ಹಿನ್ನೆಲೆ ಮುಂದೂಡಲ್ಪಟ್ಟಿದ್ದ ಕೇರಳ ಎಸ್ಎಸ್ಎಲ್ಸಿ ಮತ್ತು ಪ್ಲಸ್ ಟು (ಪಿಯುಸಿ) ವಾರ್ಷಿಕ ಪರೀಕ್ಷೆಗಳು ಇಂದಿನಿಂದ ಆರಂಭವಾಗಿವೆ.
ಪ್ಲಸ್ ಟು ಪರೀಕ್ಷೆಗಳು ಬೆಳಗ್ಗೆ 9: 40 ಕ್ಕೆ ಪ್ರಾರಂಭವಾಗಿ ಬೆಳಗ್ಗೆ 11: 30 ಕ್ಕೆ ಕೊನೆಗೊಳ್ಳಲಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಗಳು ಮಧ್ಯಾಹ್ನ 1:40 ರಿಂದ 3: 30 ರವರೆಗೆ ನಡೆಯಲಿದೆ. ಎಸ್ಸೆಸೆಲ್ಸಿ ಪರೀಕ್ಷೆಗಳು ಏಪ್ರಿಲ್ 29 ರೊಳಗೆ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳು ಏಪ್ರಿಲ್ 26 ರೊಳಗೆ ಕೊನೆಗೊಳ್ಳಲಿವೆ. ಪ್ರಶ್ನೆ ಪತ್ರಿಕೆಗಳನ್ನು ಬೆಳಗ್ಗೆ 6 ಗಂಟೆಯೊಳಗೆ ಶಾಲೆಗಳಿಗೆ ರವಾನಿಸಲಾಗುತ್ತದೆ. ಪ್ಲಸ್ ಟು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಬ್ಲಾಕ್ ಸಂಪನ್ಮೂಲ ಕೇಂದ್ರಗಳ ಮೂಲಕ ರವಾನಿಸಲಾಗುತ್ತದೆ.