ಕರ್ನಾಟಕ

karnataka

ETV Bharat / bharat

SSC recruitment scam: ಪಾರ್ಥ ಸಾರಥಿ- ಅರ್ಪಿತಾ ಸಹಭಾಗಿತ್ವದ ಕಂಪನಿಗಳು ಪತ್ತೆ

ಶಿಕ್ಷಕರ ನೇಮಕಾತಿಯಲ್ಲಿ ದೊಡ್ಡ ಹಗರಣ ನಡೆಸಿ ಸಿಕ್ಕಿಬಿದ್ದಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಸಾರಥಿ ಮತ್ತು ಅವರ ಪರಮಾಪ್ತೆ ಅರ್ಪಿತಾಗೆ ಸಂಬಂಧಿಸಿದ ಆಸ್ತಿಗಳು ಹೇರಳವಾಗಿ ಪತ್ತೆಯಾಗುತ್ತಿವೆ. ಇಬ್ಬರ ಸಹಭಾಗಿತ್ವದಲ್ಲಿ ಆರಂಭಿಸಲಾದ ಕಂಪನಿಗಳ ದಾಖಲೆಗಳನ್ನು ಇಡಿ ವಶಕ್ಕೆ ಪಡೆದಿದೆ.

ssc-recruitment-scam
ಪಾರ್ಥ ಸಾರಥಿ- ಅರ್ಪಿತಾ ಸಹಭಾಗಿತ್ವದ ಕಂಪನಿಗಳು ಪತ್ತೆ

By

Published : Aug 4, 2022, 7:03 AM IST

ಕೋಲ್ಕತ್ತಾ:ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ನಿಕಟವರ್ತಿ ನಟಿ ಅರ್ಪಿತಾ ಮುಖರ್ಜಿ ಅವರ ಕರ್ಮಕಾಂಡಗಳು ಬಗೆದಷ್ಟು ಹೊರಬರುತ್ತಿವೆ. ಅರ್ಪಿತಾರ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಹಣ ಸಿಕ್ಕ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ತನಿಖೆ ಮುಂದುವರಿಸಿರುವ ಇಡಿಗೆ ಈಗ ಮತ್ತೊಂದು ಮಹತ್ವದ ವಿಷಯ ಗೊತ್ತಾಗಿದೆ. ಇಬ್ಬರ ಸಹಭಾಗಿತ್ವದಲ್ಲಿ ನಗರದಲ್ಲಿ 2 ಕಂಪನಿಗಳನ್ನು ಆರಂಭಿಸಿರುವುದನ್ನು ಇಡಿ ಪತ್ತೆ ಮಾಡಿದೆ.

ಇಡಿ ಮೂಲಗಳ ಪ್ರಕಾರ, ಅರ್ಪಿತಾ ಮತ್ತು ಪಾರ್ಥ ಚಟರ್ಜಿ ಅವರು 2011 ಮತ್ತು 2012 ರ ನಡುವಿನ ಅವಧಿಯಲ್ಲಿ 2 ಕಂಪನಿಗಳನ್ನು ಆರಂಭಿಸಲು ನೋಂದಾಯಿಸಿದ್ದಾರೆ. ಇಬ್ಬರೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನಗರದ ಪ್ರಮುಖ ಭಾಗದಲ್ಲಿ ಆರಂಭಿಸಿದ್ದಾರೆ. ಅವರಿಗೆ ಹಲವು ಮಹತ್ವದ ದಾಖಲೆಗಳನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ಪಾರ್ಥ ಚಟರ್ಜಿ ಅವರ ನಕ್ತಾಲಾ ನಿವಾಸದಲ್ಲಿ ಶೋಧ ನಡೆಸಿದ ವೇಳೆ ಮೂರು ಡೈರಿಗಳನ್ನು ಜಪ್ತಿ ಮಾಡಲಾಗಿದೆ. ಪ್ರತಿ ಪುಟದಲ್ಲಿ ಹಲವಾರು ಖಾತೆಗಳು ಮತ್ತು ಹಣದ ವಹಿವಾಟಿನ ವಿವರಗಳನ್ನು ನಮೂದಿಸಲಾಗಿದೆ. ಅರ್ಪಿತಾ ಮುಖರ್ಜಿ ಮತ್ತು ಪಾರ್ಥ ಚಟರ್ಜಿ ಅವರ ಜಂಟಿ ಕಂಪನಿ ಕೇವಲ ಕಾಗದದ ಮೇಲೆ ಮಾತ್ರ ಇದೆ. ಕಾರ್ಯಾರಂಭ ಮಾಡಿಲ್ಲ ಎಂದು ತಿಳಿದು ಬಂದಿದೆ.

ಹಣ್ಣಿಗಾಗಿ ತಿಂಗಳಿಗೆ 2 ಲಕ್ಷ ಖರ್ಚು:ಶಿಕ್ಷಕರ ನೇಮಕಾತಿ ಹಗರಣ(ಎಸ್​ಎಸ್​ಸಿ) ದಲ್ಲಿ ಸಿಕ್ಕಿಬಿದ್ದಿರುವ ಸಚಿವ ಪಾರ್ಥ ಚಟರ್ಜಿ ಅವರ ಪರಮಾಪ್ತೆ ಅರ್ಪಿಯತಾ ಡಯಟ್​ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಅವರು ಹಣ್ಣುಗಳನ್ನು ಸೇವಿಸಲು ಪ್ರತಿ ತಿಂಗಳು 2.5 ಲಕ್ಷ ರೂಪಾಯಿಗಳನ್ನು ವ್ಯಯಿಸುತ್ತಿದ್ದರು ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ. ಇಷ್ಟು ಪ್ರಮಾಣದ ಹಣವನ್ನು ಅರ್ಪಿತಾ ಹಣ್ಣುಗಳ ಖರೀದಿಗೆ ಮಾತ್ರ ಖರ್ಚು ಮಾಡಿರುವುದು ಅಚ್ಚರಿಯ ಸಂಗತಿಯಾಗಿದೆ.

ಓದಿ:ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಪ್ರತಿ ಕ್ವಿಂಟಲ್‌ಗೆ ಇಷ್ಟೊಂದು ದರ ಹೆಚ್ಚಿಸಿದ ಮೋದಿ ಕ್ಯಾಬಿನೆಟ್!

ABOUT THE AUTHOR

...view details