ಬಿಹಾರ: ಪೂರ್ವ ಚಂಪಾರಣ್ ಜಿಲ್ಲೆಯ ಭಾರತ - ನೇಪಾಳ ಗಡಿಯಲ್ಲಿ ಎಸ್ಎಸ್ಬಿ (ಸಶಸ್ತ್ರ ಸೀಮಾ ಬಲ) ಕಾರ್ಯಾಚರಣೆ ನಡೆಸಿ ಡ್ರೋನ್ ಕ್ಯಾಮೆರಾ ಹೊಂದಿದ್ದ ಮೂವರನ್ನು ವಶಕ್ಕೆ ಪಡೆದಿದೆ. ಅಧಿಕಾರಿಗಳು ಅವರಿಂದ 8 ಚೀನಿ ಡ್ರೋನ್ ಕ್ಯಾಮೆರಾಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಂಡ್ವಾ ಚೈನ್ಪುರ ಠಾಣಾ ವ್ಯಾಪ್ತಿಯ ನೇಪಾಳ ಗಡಿಯಲ್ಲಿ ಎಸ್ಎಸ್ಬಿ ಪರಿಶೀಲನೆ ನಡೆಸುತ್ತಿದ್ದ ವೇಳೆ, ಡ್ರೋನ್ ಕ್ಯಾಮೆರಾ ಹೊಂದಿದ್ದ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.