ಕರ್ನಾಟಕ

karnataka

ETV Bharat / bharat

ಏಪ್ರಿಲ್​ ತಿಂಗಳಲ್ಲಿ ಒಟಿಟಿಗೆ ಪಠಾಣ್​ ಚಿತ್ರ... ಅಭಿಮಾನಿಗಳಲ್ಲಿ ಕಾತರ - ಈಟಿವಿ ಭಾರತ ಕನ್ನಡ

ಏಪ್ರಿಲ್​ ತಿಂಗಳಿನಲ್ಲಿ ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರ ಒಟಿಟಿಗೆ ಬರಲಿದ್ದು, ಆದರೇ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಖಚಿತ ಪಡಿಸಿಲ್ಲ.

srks-pathaan-movie-arrive-on-ott
ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರ

By

Published : Jan 17, 2023, 6:59 PM IST

ಹೈದರಾಬಾದ್​:ಬಾಲಿವುಡ್ ಬಾದ್​ಷಾ ಶಾರುಖ್​ ಖಾನ್​ ಅಭಿನಯದ ಬಹುನಿರೀಕ್ಷಿತ 'ಪಠಾಣ್'​ ಚಿತ್ರ ಜನವರಿ 25 ರಂದು ತೆರೆ ಕಾಣಲಿದ್ದು, ಅಭಿಮಾನಿಗಳು ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ನಾಲ್ಕು ವರ್ಷಗಳ ಬಳಿಕ ಶಾರುಖ್​ ಖಾನ್​ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಇದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಇನ್ನು ಪಠಾಣ್​ ಚಿತ್ರ ಏಪ್ರಿಲ್​ ತಿಂಗಳಿನಲ್ಲಿ ಒಟಿಟಿಗೆ ಬರಲಿದೆ.

ಆದರೇ ಒಟಿಟಿಯಲ್ಲಿ ಪಠಾಣ್​ ಬಿಡುಗಡೆ ದಿನಾಂಕ ಯಾವಾಗ ಎಂಬುವುದನ್ನು ​ಚಿತ್ರದ ನಿರ್ಮಾಪಕರು ಸ್ಪಷ್ಟಪಡಿಸಿಲ್ಲ. ಒಟಿಟಿಯಲ್ಲಿ ಬಿಡುಗಡೆಗೆ ಮೊದಲು ಕೆಲವು ಬದಲಾವಣೆಗಳನ್ನು ಮಾಡುವಂತೆ ದೆಹಲಿ ಹೈಕೋರ್ಟ್ ತಯಾರಿಕರಿಗೆ ಸೂಚಿಸಿದ. ​ದೃಷ್ಟಿ ದೋಷ ಮತ್ತು ಶ್ರವಣ ದೋಷ ಹೊಂದಿದವರ ಅನುಕೂಲಕ್ಕಾಗಿ ಹಿಂದಿ ಉಪಶೀರ್ಷಿಕೆ, ಕ್ಲೋಸ್​ ಕ್ಯಾಪ್ಶನ್​ ಸೇರಿದಂತೆ ಆಡಿಯೋ ವಿವರಣೆಯನ್ನು ಒದಗಿಸುವಂತೆ ದೆಹಲಿ ಹೈಕೋರ್ಟ್​ ತಿಳಿಸಿದೆ.

ಈ ಬಗ್ಗೆ ಕಾನೂನು ವಿದ್ಯಾರ್ಥಿಗಳು, ವಿಕಲಚೇತನರು ಮತ್ತು ಅಂಗವಿಕಲ ಹಕ್ಕುಗಳ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಯನ್ನು ಪ್ರತಿಭಾ ಎಂ.ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿ ಚಿತ್ರ ತಯಾರಿಕರಿಗೆ ನಿರ್ದೇಶನ ಮಾಡಿದ್ದಾರೆ. ಇನ್ನು ವರದಿಗಳ ಪ್ರಕಾರ ಏಪ್ರಿಲ್​​ ತಿಂಗಳು 25ನೇ ತಾರೀಖಿನಂದು ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರ ಪ್ರೈಮ್​ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಒಟಿಟಿ ಬಿಡುಗಡೆಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ ಈಗಾಗಲೇ ಚಿತ್ರಕ್ಕೆ ಅನುಮೋದನೆ ನೀಡಿದೆ. ಆದರೇ ನ್ಯಾಯಾಲಯ ಸೂಚಿಸಿದಂತೆ ಉಪಶೀರ್ಷಿಕೆಗಳನ್ನು ಸಿದ್ಧಪಡಿಸಿದ ನಂತರ ಫೆಬ್ರವರಿ 20 ರೊಳಗೆ ಅದನ್ನು ಪರಿಶೀಲಿಸಲು ಸಿಬಿಎಫ್​​ಸಿಗೆ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್)ಗೆ ಸಲ್ಲಿಸ ಬೇಕಾಗುತ್ತದೆ.

ಚಿತ್ರತಂಡದ ವಿರುದ್ಧ ದೂರು: ಇನ್ನೂ ಈ ಹಿಂದೆ ಫಠಾಣ್​ ಚಿತ್ರದ 'ಬೇಷರಂ ರಂಗ್' ಹಾಡು ಬಿಡುಗಡೆಗೊಂಡಿದ್ದ ವೇಳೆ ಅದಕ್ಕೆ ವಿರೋಧ ವ್ಯಕ್ತವಾಗಿದ್ದುವು. ಅಲ್ಲದೇ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಬಾಲಿವುಡ್ ನಟರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಚಿತ್ರತಂಡ ಧಕ್ಕೆ ತಂದಿದೆ ಎಂದು ಚಿತ್ರತಂಡದ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ನ್ಯಾಯಾಲಯಕ್ಕೆ ವಕೀಲ ಸುಧೀರ್ ಓಜಾ ಎನ್ನುವವರು ದೂರು ಸಲ್ಲಿಸಿದ್ದರು. ಆದಾದ ಬಳಿಕ ಎಲ್ಲೇಡೆ ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರಕ್ಕೆ ಬಾಯ್ಕಾಟ್ ಅಭಿಯಾನಗಳು ನಡೆದಿದ್ದವು.

ಚಿತ್ರದ ಟ್ರೈಲರ್​ ಬಿಡುಗಡೆ: ಇನ್ನು ಇದೇ ಜ.10ರಂದು ಚಿತ್ರದ ಟ್ರೈಲರ್​ ಮೂರು ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು. ನಟ ಜಾನ್ ಅಬ್ರಾಹಂ ನೆಗೆಟಿವ್​ ರೋಲ್​ನಲ್ಲಿ ನಟಿಸಿದ್ದಾರೆ. ಉಗ್ರ ಸಂಘಟನೆ ಮೂಲಕ ದೇಶಗಳ ಮೇಲೆ ದಾಳಿ ಮಾಡುತ್ತಿರುತ್ತಾರೆ. ಈ ಸಂಘಟನೆ ಭಾರತವನ್ನು ಟಾರ್ಗೆಟ್ ಮಾಡುತ್ತದೆ. ಈ ದಾಳಿಯನ್ನು ತಪ್ಪಿಸಲು ಶಾರುಖ್ ಹೋರಾಡುತ್ತಾರೆ. ಇದಕ್ಕೆ ದೀಪಿಕಾ ಪಡುಕೋಣೆ ಸಾಥ್ ನೀಡುತ್ತಾರೆ. ಇದು ಚಿತ್ರ ಕಥೆ. ಟ್ರೈಲರ್​ನಲ್ಲಿ ಸಾಕಷ್ಟು ಆ್ಯಕ್ಷನ್ ಸೀನ್​​​ಗಳಿವೆ. ಶಾರುಖ್ ಹಾಗೂ ಜಾನ್ ಅಬ್ರಾಹಂ ಮುಖಾಮುಖಿಯಾಗಿ ಭರ್ಜರಿ ಫೈಟ್ ಮಾಡಿದ್ದಾರೆ.

ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜನವರಿ 25ರಂದು ಬಿಡುಗಡೆಗೆ ಸಜ್ಜಾಗಿದೆ. ಯಶ್ ರಾಜ್ ಫಿಲ್ಮ್ಸ್ ಪಠಾಣ್‌ನ ತಮಿಳು ಮತ್ತು ತೆಲುಗು ಭಾಷೆಯ ಟ್ರೇಲರ್‌ಗಳನ್ನು ಬಿಡುಗಡೆ ಮಾಡಲು ದಕ್ಷಿಣ ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳಾದ ದಳಪತಿ ವಿಜಯ್ ಮತ್ತು ರಾಮ್ ಚರಣ್ ಅವರನ್ನು ಆಹ್ವಾನಿಸಿತ್ತು.

ಇದನ್ನೂ ಓದಿ:ಆ್ಯಕ್ಷನ್​ ಸೀನ್​ಗಳಿಂದ ಕೂಡಿದ ಪಠಾಣ್​ ಟ್ರೈಲರ್ ರಿಲೀಸ್: ಸೌತ್​ ಸೂಪರ್​ಸ್ಟಾರ್ಸ್ ಏನಂದ್ರು ಗೊತ್ತಾ?

ABOUT THE AUTHOR

...view details