ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಪಠಾಣ್ ಸಿನೆಮಾದ ಬಿಡುಗಡೆ ದಿನಾಂಕ ಇದೀಗ ಬಹಿರಂಗಗೊಂಡಿದೆ. ಶಾರುಖ್ ಖಾನ್ ನಟನೆಯ ಮುಂಬರುವ ಸಿನೆಮಾ ಪಠಾಣ್ ಮುಂದಿನ ವರ್ಷ ಜನವರಿ 25ಕ್ಕೆ ತೆರೆಕಾಣಲಿದ್ದು, ಸಿನೆಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸುತ್ತಿದ್ದಾರೆ. ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಸಿನೆಮಾ ತೆರೆ ಕಾಣಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಾರುಖ್ ಖಾನ್ ನನಗೆ ಗೊತ್ತಿದೆ ಈಗಾಗಲೇ ತಡವಾಗಿದೆ. ಆದರೆ ದಿನಾಂಕವನ್ನು ನೆನಪಿನಲ್ಲಿಡಿ, ಪಠಾಣ್ ಸಮಯ ಈಗ ಶುರುವಾಗುತ್ತಿದೆ. ಜನವರಿ 25 ರಂದು ಬಿಗ್ ಸಿನಿಮಾಗಳಲ್ಲಿ ನೋಡೋಣ. ಹಿಂದಿ, ತೆಲುಗು,ತಮಿಳು ಮೂರು ಭಾಷೆಗಳಲ್ಲಿ ಸಿನೆಮಾ ಬಿಡುಗಡೆಯಾಗುವುದಾಗಿ ಹೇಳಿದ್ದಾರೆ.