ಹೈದ್ರಾಬಾದ್ :ಕೋವಿಡ್ ಹಾವಳಿಯಿಂದಾಗಿ ವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುವ ಭಕ್ತರಿಗೆ ನಿಲ್ಲಿಸಿದ್ದ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನವನ್ನು ಮರು ಆರಂಭಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಾಗಿದೆ.
ಶೀಘ್ರವೇ ವೃದ್ಧರು, ಅಂಗವಿಕಲರು, ಕಾಯಿಲೆಗಳಿಂದ ಬಳಲುತ್ತಿರುವ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲು ಟಿಟಿಡಿ ತೀರ್ಮಾನಿಸಿದೆ. ಈ ಭಕ್ತರು ಟಿಟಿಡಿ ವೆಬ್ಸೈಟ್ನಲ್ಲಿ ಬಾರ್ಕೋಡ್ ಹೊಂದಿರುವ ಟೋಕನ್ ಪಡೆಯಬಹುದಾಗಿದೆ. ದಿನಕ್ಕೆ ಒಂದು ಸಾವಿರದಂತೆ ಟೋಕನ್ ನೀಡಲಾಗುವುದು ಎಂದು ಟಿಟಿಡಿ ಹೇಳಿದೆ.