ತಿರುಪತಿ(ಆಂಧ್ರಪ್ರದೇಶ):ಜನವರಿ ತಿಂಗಳಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸುವವರಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆನ್ಲೈನ್ನಲ್ಲಿ ವಿಶೇಷ ದರ್ಶನದ ಟಿಕೆಟ್ಗಳನ್ನು ಬಿಡುಗಡೆ ಮಾಡಿದ್ದು, ಕೇವಲ 80 ನಿಮಿಷದಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ವಿಶೇಷ ದರ್ಶನಕ್ಕಾಗಿ ಒಂದು ಟಿಕೆಟ್ನ ಬೆಲೆ 300 ರೂಪಾಯಿ ಇದ್ದು, ಸುಮಾರು 4 ಲಕ್ಷದ 60 ಸಾವಿರ ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ. ಜನವರಿಯಲ್ಲಿ ವೈಕುಂಠ ಏಕಾದಶಿಯ ಕಾರಣದಿಂದಾಗಿ ಹೆಚ್ಚಿನ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸರ್ವದರ್ಶನಂ ಟಿಕೆಟ್ಗಳನ್ನು ಇದೇ ತಿಂಗಳ 31ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.