ತಿರುಪತಿ(ಆಂಧ್ರಪ್ರದೇಶ):ಕೆಲವು ತಿಂಗಳುಗಳಿಂದ ತಿರುಪತಿಯ ತಿರುಮಲದಲ್ಲಿ ಸ್ಥಗಿತಗೊಳಿಸಲಾಗಿದ್ದ ಶ್ರೀವೆಂಕಟಶ್ವರನ ಸರ್ವದರ್ಶನ ಟೋಕನ್ಗಳನ್ನು ನೀಡಲು ಟಿಟಿಡಿ ( ತಿರುಮಲ-ತಿರುಪತಿ ದೇವಸ್ಥಾನಂ) ಪುನಾರಂಭಿಸಿದೆ. ಆದರೆ, ವೆಂಕಟೇಶ್ವರ ಸ್ವಾಮಿಯ ಸರ್ವದರ್ಶನ ಅವಕಾಶ ಕೇವಲ ಚಿತ್ತೂರು ಜಿಲ್ಲೆಯ ಜನರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಕೊರೊನಾ ಹಾವಳಿಯ ಕಾರಣಕ್ಕೆ ಏಪ್ರಿಲ್ 11ರಿಂದ ಸರ್ವದರ್ಶನ ಟೋಕನ್ಗಳನ್ನು ನೀಡುವುದನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಸರ್ವದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.