ಶ್ರೀನಗರ: ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಇಂದು ಭಾರಿ ಹಿಮಪಾತವಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಅಲ್ಲದೇ ಪ್ರತಿಕೂಲ ಹವಾಮಾನ ವಿಮಾನಯಾನದ ಮೇಲೆ ಪರಿಣಾಮ ಬೀರಿದೆ. ಜಮ್ಮು ಮತ್ತು ಕಾಶ್ಮೀರದ ಎತ್ತರದ ಪ್ರದೇಶದಲ್ಲಿ ಭಾರಿ ಹಿಮಪಾತವಾದರೆ, ಬಯಲು ಪ್ರದೇಶದ ಅನೇಕ ಪ್ರದೇಶಗಳಲ್ಲಿ ಲಘು ಹಿಮಪಾತವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ಸಂಚಾರದಲ್ಲಿ ವ್ಯತ್ಯಯ:ಕಡಿಮೆ ಗೋಚರತೆಯಿಂದಾಗಿ ಹಲವು ವಿಮಾನಗಳ ಪ್ರಯಾಣ ವಿಳಂಬವಾಗಿದೆ. ಶ್ರೀನಗರದಲ್ಲಿ ಗುರುವಾರ ರಾತ್ರಿ ಕನಿಷ್ಠ 1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಿಂದಿನ ರಾತ್ರಿ ಮೈನಸ್ 0.2 ಡಿಗ್ರಿ ಇತ್ತು. ಖಾಜಿಗುಂಡ್, ಕಣಿವೆಯ ಹೆಬ್ಬಾಗಿಲು, ಕನಿಷ್ಠ ತಾಪಮಾನ 0.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮೂಲಗಳ ಪ್ರಕಾರ, ಆಡಳಿತ ಮಂಡಳಿ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದರೂ ಕೆಲ ವಾಹನಗಳು ಸಂಚರಿಸುತ್ತಿದ್ದವು. ವಾಹನ ಸವಾರರು ರಸ್ತೆಯಿಂದ ಹಿಮವನ್ನು ತೆರವುಗೊಳಿಸುತ್ತಿರುವುದು ಕಂಡು ಬಂದಿದೆ.
"ನಾವು ಶ್ರೀನಗರ ಮತ್ತು ಖಾಜಿಗುಂಡ್ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸದಂತೆ ಮತ್ತು ಅವರು ಎಲ್ಲಿದ್ದರೂ ಅಲ್ಲಿಯೇ ಇರುವಂತೆ ನಾವು ಸಲಹೆ ನೀಡುತ್ತಿದ್ದೇವೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಗುಲ್ಮಾರ್ಗ್‌ನ ಪ್ರಸಿದ್ಧ ಸ್ಕೀ ರೆಸಾರ್ಟ್, ಪಹಲ್ಗಾಮ್ ಮತ್ತು ಸೋನಾಮಾರ್ಗ್‌ನ ಪ್ರವಾಸಿ ರೆಸಾರ್ಟ್‌ಗಳು ಮತ್ತು ಇತರ ಹಲವು ಸ್ಥಳಗಳಲ್ಲಿ ಹಿಮಪಾತವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಕತ್ತಲೆ ಸೃಷ್ಟಿಸಿದ ದಟ್ಟ ಮಂಜು: ವಿಮಾನ, ರೈಲು ಸಂಚಾರ ವ್ಯತ್ಯಯ, ಇನ್ನೆರಡು ದಿನ ಇದೇ ಸ್ಥಿತಿ