ಶ್ರೀನಗರ: ಭಾರತ ಸರ್ಕಾರ ಶ್ರೀನಗರ ವಿಮಾನ ನಿಲ್ದಾಣವನ್ನು ಪ್ರಮುಖ ವಿಮಾನ ನಿಲ್ದಾಣ ಎಂದು ಘೋಷಿಸಿದೆ. ಈ ಘೋಷಣೆ ನಂತರ AERA(Airports Economic Regulatory Authority of India) ಶ್ರೀನಗರ ವಿಮಾನ ನಿಲ್ದಾಣದಲ್ಲಿ ಏರೋನಾಟಿಕಲ್ ಸೇವೆಗಳಿಗೆ ಸುಂಕವನ್ನು ನಿರ್ಧರಿಸಲಿದೆ.
ಶ್ರೀನಗರ ವಿಮಾನ ನಿಲ್ದಾಣವನ್ನು ಪ್ರಮುಖ ವಿಮಾನ ನಿಲ್ದಾಣ ಎಂದು ಘೋಷಣೆ
ಶ್ರೀನಗರದ ವಿಮಾನ ನಿಲ್ದಾಣವನ್ನು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಕಾಯ್ದೆ-2008 ರ ಅಡಿಯಲ್ಲಿ ಪ್ರಮುಖ ವಿಮಾನ ನಿಲ್ದಾಣವೆಂದು ಘೋಷಿಸಲಾಗಿದೆ.
ಶ್ರೀನಗರ ವಿಮಾನ ನಿಲ್ದಾಣವನ್ನು ಪ್ರಮುಖ ವಿಮಾನ ನಿಲ್ದಾಣ ಎಂದು ಘೋಷಣೆ
ಈ ಪ್ರಕ್ರಿಯೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಶ್ರೀನಗರದ ವಿಮಾನ ನಿಲ್ದಾಣವನ್ನು ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಕಾಯ್ದೆ-2008 ರ ಅಡಿಯಲ್ಲಿ ಪ್ರಮುಖ ವಿಮಾನ ನಿಲ್ದಾಣವೆಂದು ಘೋಷಿಸಲು ಅಧಿಸೂಚನೆಯನ್ನು ಹೊರಡಿಸಿದೆ.
ಅಧಿಸೂಚನೆ ಪ್ರಕಾರ, ವಿಮಾನ ನಿಲ್ದಾಣಗಳ ಆರ್ಥಿಕ ಪ್ರಾಧಿಕಾರ ಕಾಯ್ದೆ, 2008 Act, 2008 (NO. 27 OF 2008) ಸೆಕ್ಷನ್ 2 ರ ಉಪ-ವಿಭಾಗ (i) ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ, ಕೇಂದ್ರ ಸರ್ಕಾರವು ಶ್ರೀನಗರದ ವಿಮಾನ ನಿಲ್ದಾಣವನ್ನು ಪ್ರಮುಖ ವಿಮಾನ ನಿಲ್ದಾಣವೆಂದು ಘೋಷಿಸುತ್ತದೆ ಎಂದಿದೆ.