ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಕಳೆದ ಫೆಬ್ರವರಿ ತಿಂಗಳಲ್ಲಿ ಶ್ರೀನಗರದ ಬಾಲಕಿಯ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣದ ಪ್ರಮುಖ ಆರೋಪಿಯ ಹೇಳಿಕೆಯನ್ನು ಇಲ್ಲಿನ ಕೋರ್ಟ್ ದಾಖಲಿಸಿಕೊಂಡಿದೆ. ಶ್ರೀನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗೆ 55 ಪ್ರಶ್ನೆಗಳನ್ನು ಕೇಳಿದ್ದು, ಹೇಳಿಕೆ ದಾಖಲಿಸಿಕೊಂಡಿತು.
ಪ್ರಮುಖ ಆರೋಪಿ ಸಜ್ಜದ್ ಅಹ್ಮದ್ ರಾಥರ್ ಪರ ವಕೀಲ ಅಮೀರ್ ಮಸೂದಿ ಮತ್ತು ಇತರ ಆರೋಪಿಗಳ ವಕೀಲ ವಸೀಮ್ ಅಹ್ಮದ್ ಕೋರ್ಟ್‌ನಲ್ಲಿ ಹಾಜರಿದ್ದರು. ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ವಿಚಾರಣೆ ಡಿಸೆಂಬರ್ 29ಕ್ಕೆ ನಡೆಯಲಿದೆ.
ಪ್ರಕರಣದ ವಿವರ:ಫೆ.1 ರಂದು ಶ್ರೀನಗರದ ವಂಟ್ಪೋರಾ ಪ್ರದೇಶದಲ್ಲಿ 24 ವರ್ಷದ ಯುವತಿಯ ಮೇಲೆ ಆಕೆಯ ಮನೆಯ ಹೊರಗೆ ಆ್ಯಸಿಡ್ ದಾಳಿ ನಡೆದಿತ್ತು. ಆಕೆಯ ಮುಖದ ಮೇಲೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದವು. ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಆ್ಯಸಿಡ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅಂಗಡಿಯನ್ನು ಸೀಲ್ ಮಾಡಲಾಗಿತ್ತು.