ನವದೆಹಲಿ: 18 ವರ್ಷ ವಯೋಮಿತ ಮೇಲ್ಪಟ್ಟವರಲ್ಲಿ ಸಕ್ರಿಯ ರೋಗನಿರೋಧಕ ಶಕ್ತಿ ವೃದ್ಧಿಸಲು ಸ್ಪುಟ್ನಿಕ್ V ಲಸಿಕೆ ಶಿಫಾರಸು ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
21 ದಿನಗಳ ಮಧ್ಯಂತರದೊಂದಿಗೆ 0.5 ಮಿಲಿ ತಲಾ 2 ಡೋಸ್‌ಗಳಲ್ಲಿ ಇಂಟ್ರಾಮಸ್ಕುಲರ್ ಮೂಲಕ ಪಡೆಇಯಬೇಕು. ಲಸಿಕೆಯನ್ನು ಮೈನಸ್ 18 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಬೇಕಾಗಿದೆ. ಪರಸ್ಪರ ಬದಲಾಯಿಸಲಾಗದ I ಮತ್ತು II ಕಾಂಪೊನೆಂಟ್ ಒಳಗೊಂಡಿದೆ ಎಂದು ಹೇಳಿದೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಏಪ್ರಿಲ್ 13ರಂದು ತುರ್ತು ಬಳಸಲು ಸ್ಪುಟ್ನಿಕ್ V ಲಸಿಕೆಗೆ ಅನುಮೋದಿಸಿದೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ - ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಹಾಗೂ ದೇಶೀಯವಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ನಂತರ ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಮೂರನೇ ಲಸಿಕೆ ಇದಾಗಿದೆ.