ಕರ್ನಾಟಕ

karnataka

ETV Bharat / bharat

ಕೊರೊನಾ ರೂಪಾಂತರಿ ವಿರುದ್ಧ Sputnik V ಲಸಿಕೆ ರಾಮಬಾಣ: RDIF - ಆರ್​ಡಿಐಎಫ್​

Sputnik V ಲಸಿಕೆ ಕೊರೊನಾ ರೂಪಾಂತರಗಳ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಗಮಾಲೆಯಾ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆ್ಯಂಡ್ ಮೈಕ್ರೋಬಯಾಲಜಿ ಹಾಗೂ ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್(RDIF) ಘೋಷಿಸಿದೆ.

Sputnik V
ಆರ್​ಡಿಐಎಫ್​

By

Published : Jul 13, 2021, 8:02 AM IST

ನವದೆಹಲಿ: ರಷ್ಯಾದ Sputnik V ಲಸಿಕೆಯು ಕೊರೊನಾ ರೂಪಾಂತರಗಳ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲದು ಎಂದು ರಷ್ಯಾದ ಗಮಾಲೆಯಾ ನ್ಯಾಷನಲ್ ರಿಸರ್ಚ್ ಇನ್​ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ ಅಧ್ಯಯನ ತಿಳಿಸಿದೆ.

ಸ್ಪುಟ್ನಿಕ್-ವಿ ಲಸಿಕೆ ಸೇರಿದಂತೆ ಎಲ್ಲಾ ರೀತಿಯ ಎಂಆರ್‌ಎನ್‌ಎ ಲಸಿಕೆಗಳು ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಎಂದು RDIF ಸಿಇಒ ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ. ರಷ್ಯಾದ ಗಮಾಲೆಯಾ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆ್ಯಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಟುಟ್ನಿಕ್-ವಿ ಲಸಿಕೆಯು ಕೋವಿಡ್-19ನ ಡೆಲ್ಟಾ ರೂಪಾಂತರಿ ವಿರುದ್ಧ ಶೇ.90ರಷ್ಟು ಹೋರಾಡುತ್ತದೆ ಎಂದು ತಜ್ಞರು ಇತ್ತೀಚೆಗೆ ಹೇಳಿದ್ದರು.

ಇದೀಗ ಮತ್ತೊಂದು ಅಧ್ಯಯನ ನಡೆದಿದ್ದು, ಸ್ಪುಟ್ನಿಕ್ ವಿ ಲಸಿಕೆ ಕೊರೊನಾ ರೂಪಾಂತರಗಳ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಗಮಾಲೆಯಾ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಆ್ಯಂಡ್ ಮೈಕ್ರೋಬಯಾಲಜಿ ಹಾಗೂ ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ ಘೋಷಿಸಿದೆ.

ಆಲ್ಫಾ, ಬೆಟಾ, ಗಾಮಾ, ಡೆಲ್ಟಾ ರೂಪಾಂತರಿಗಳ ವಿರುದ್ಧ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಹೋರಾಡುತ್ತದೆ. ರೂಪಾಂತರಿಗಳು ಮೂಲ ಸೋಂಕಿಗಿಂತ ಬಲಿಷ್ಠವಾಗಿದ್ದು, ಹೆಚ್ಚು ಅಪಾಯಕಾರಿಯಾಗಿವೆ. ಇದಕ್ಕೆ ಸ್ಪುಟ್ನಿಕ್ ವಿ ಲಸಿಕೆಯ ಒಂದು ಡೋಸ್ ಕೂಡ ಪರಿಣಾಮಕಾರಿಯಾಗಿದೆ ಎಂದು ಆರ್‌ಡಿಐಎಫ್‌ನ ಸಿಇಒ ಕಿರಿಲ್ ಡಿಮಿಟ್ರಿವ್ ತಿಳಿಸಿದ್ದಾರೆ. ಸ್ಪುಟ್ನಿಕ್ ವಿ ಲಸಿಕೆಯು 67 ದೇಶಗಳಲ್ಲಿ ನೋಂದಣಿಯಾಗಿದ್ದು, ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್‌ ಲಸಿಕೆ ನಂತರ ಅನುಮೋದನೆ ಪಡೆದ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಆಗಿದೆ.

ABOUT THE AUTHOR

...view details