ಹೈದರಾಬಾದ್ :ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್‌ಎಂಎ) ರೋಗದಿಂದ ಬಳಲುತ್ತಿರುವ ತಮ್ಮ 2 ವರ್ಷದ ಮಗುವಿಗೆ (ಜೊಲ್ಗೆನ್ಸ್ಮಾ) ಚಿಕಿತ್ಸೆ ಕೊಡಿಸಲು ಪೋಷಕರಾದ ಯೋಗೇಶ್ ಗುಪ್ತಾ ಮತ್ತು ರೂಪಾಲ್ ಗುಪ್ತಾ ಅವರು ಸಾಕಷ್ಟು ಶ್ರಮಪಡುತ್ತಿದ್ದಾರೆ.
ಇವರು ಮೂಲತಃ ಛತ್ತೀಸ್ಗಢದವರಾಗಿದ್ದು, ಕಳೆದ 10 ವರ್ಷಗಳಿಂದ ಹೈದರಾಬಾದ್ನ ನಲ್ಲಗಂಡಲ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. 2018ರಲ್ಲಿ ಅವರು ಆಯನ್ಶ್‌ನಿಗೆ ಜನ್ಮ ನೀಡಿದ್ದಾರೆ. ದುರದೃಷ್ಟವೆಂದರೆ ಮಗು ಹುಟ್ಟಿದಾಗಿನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದೆ.
ಈ ಕಾಯಿಲೆಯನ್ನ ಗುಣಪಡಿಸಬೇಕಾದರೆ ಜೊಲ್ಗೆನ್ಸ್ಮಾ ಒನ್-ಟೈಮ್ ಜೀನ್ ರಿಪ್ಲೇಸ್ಮೆಂಟ್ ಥೆರಪಿಯಿಂದ ಮಾತ್ರ ಸಾಧ್ಯ ಎಂದು ವೈದ್ಯರು ಸೂಚಿಸಿದ್ದಾರೆ.