ನವದೆಹಲಿ : ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಕೋವಿಡ್ 2.0 ಪ್ರಭಾವ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೌಕರರ ವೇತನ ಮೊದಲಿನಂತೆ ಕೊಡಲು ನಿರ್ಧರಿಸಿದೆ.
ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಉದ್ಯೋಗಿಗಳಿಗೆ ಸೆಪ್ಟೆಂಬರ್ ತಿಂಗಳ ಸಂಪೂರ್ಣ ವೇತನ ಪಾವತಿಸಿದೆ. ಅದಲ್ಲದೇ, ಕೋವಿಡ್ ಪೂರ್ವದ ದಿನಗಳಲ್ಲಿ ಇದ್ದಂತೆ ತಿಂಗಳ ಕೊನೆಯ ದಿನದಂದು ಸಂಬಳ ವಿತರಿಸಿದೆ.
"ಸೆಪ್ಟೆಂಬರ್ 2021 ರಿಂದ, ಕಂಪನಿಯು ಎರಡು ಭಾಗಗಳಲ್ಲಿ ವೇತನ ಪಾವತಿಸುವ ಬದಲು ಒಂದೇ ಬಾರಿಗೆ ಸಂಬಳವನ್ನು ಪಾವತಿಸಲು ಮುಂದಾಗಿದೆ" ಎಂದು ಏರ್ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಸ್ಪೈಸ್ ಜೆಟ್ ಏಪ್ರಿಲ್ 2020 ರಿಂದ ಉದ್ಯೋಗಿಗಳ ವೇತನದಲ್ಲಿ ಶೇಕಡಾ 10-25 ರಷ್ಟು ಸಂಬಳವನ್ನು ಕಡಿತಗೊಳಿಸಿತ್ತು. ಇದನ್ನು ನವೆಂಬರ್ 2020 ರಲ್ಲಿ ಶೇಕಡಾ 50 ರಷ್ಟಕ್ಕೆಏರಿಕೆ ಮಾಡಿತ್ತು.
ಕಡಿಮೆ ವೇತನ ಶ್ರೇಣಿಗಳಲ್ಲಿರುವ ಉದ್ಯೋಗಿಗಳು ಈ ಕಡಿತಗಳಿಂದ ಯಾವುದೇ ಪರಿಣಾಮ ಬೀರುವುದಿಲ್ಲ, ಅವರ ಸಂಬಳವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಏರ್ಲೈನ್ ಹೇಳಿದೆ.