ಕರ್ನಾಟಕ

karnataka

ETV Bharat / bharat

ಲಾಕ್​​​ಡೌನ್​​​​ ವೇಳೆ ವಲಸಿಗರಿಗೆ ಉಸಿರಾದ ಸೋನು ಸೂದ್: ​​ಸ್ಪೈಸ್​ಜೆಟ್​ನಿಂದ ಕರುಣಾಮಯಿಗೆ ವಿಶೇಷ ಗೌರವ - Sonu Sood

ಅಸಾಧಾರಣ ಪ್ರತಿಭಾವಂತ ಸೋನು ಸೂದ್ ಕೊರೊನಾ ಸಮಯದಲ್ಲಿ ಲಕ್ಷಾಂತರ ಭಾರತೀಯರನ್ನು ಅವರವರ ಮನೆಗೆ ತಲುಪಿಸಿದ್ದಾರೆ. ಅವರ ಪ್ರೀತಿಪಾತ್ರರನ್ನು ಭೇಟಿಯಾಗಲು ಸಹಾಯ ಮಾಡಿದ್ದಾರೆ. ಅವರ ಇಡೀ ಕುಟುಂಬವನ್ನು ರಕ್ಷಿಸಿದ್ದಾನೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.

sonu-sood
ಸೋನು ಸೂದ್

By

Published : Mar 20, 2021, 8:16 PM IST

ಹೈದರಾಬಾದ್​: ಇಡೀ ದೇಶವು ಕೊರೊನಾದಿಂದ ಸಂಕಷ್ಟ ಎದುರಿಸುತ್ತಿದ್ದ ಸಮಯದಲ್ಲಿ ಲಾಕ್​​ಡೌನ್ ಜಾರಿಯಾಗಿತ್ತು. ಈ ವೇಳೆ ಕೋಟ್ಯಂತರ ಮಂದಿ ತಮ್ಮ ಊರಿಗೆ ತೆರಳಲಾಗದೆ ಸಿಲುಕಿದ್ದರು. ಈ ಸಂದರ್ಭದಲ್ಲಿ ನಟ ಸೋನು ಸೂದ್ ನಗರಗಳಲ್ಲಿ ಸಿಲುಕಿದ್ದ ಜನರನ್ನು ಸ್ವಂತ ಊರಿಗೆ ತಲುಪಿಸಲು ಪಣ ತೊಟ್ಟಿದ್ದರು.

ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರವರ ಮನೆಗೆ ತಲುಪಿಸಿ ಹೀರೋ ಆಗಿದ್ದರು. ಇದೀಗ ಅವರ ಸಾಮಾಜಿಕ ಕಳಕಳಿಗೆ ಖಾಸಗಿ ವಿಮಾನಯಾನ ಸಂಸ್ಥೆಯೊಂದು ವಿಶೇಷವಾಗಿ ಗೌರವ ಸಮರ್ಪಿಸಿದೆ. ವಿಮಾನಯಾನ ಸಂಸ್ಥೆಯಾಗಿರುವ ಸ್ಪೈಸ್​​ ಜೆಟ್​​ ಸೋನು ಸೂದ್​​ ಚಿತ್ರವನ್ನು ವಿಮಾನದ ಮೇಲೆ ಬಿಡಿಸಿ ಧನ್ಯವಾದ ಅರ್ಪಿಸಿದೆ.

ಸ್ಪೈಸ್ ಜೆಟ್ ತನ್ನ ಬೋಯಿಂಗ್ 737 ವಿಮಾನದಲ್ಲಿ ಸೋನು ಅವರ ದೊಡ್ಡ ಚಿತ್ರವನ್ನು ಬಿಡಿಸಿ 'ರಕ್ಷಕ ಸೋನು ಸೂದ್​​ಗೆ ಸಲ್ಯೂಟ್​​' ಎಂದು ಬರೆಯಲಾಗಿದೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಹಂಚಿಕೊಂಡಿರುವ ಸ್ಪೈಸ್‌ಜೆಟ್ ಸಂಸ್ಥೆ, ಅಸಾಧಾರಣ ಪ್ರತಿಭಾವಂತ ಸೋನು ಸೂದ್ ಕೊರೊನಾ ಸಮಯದಲ್ಲಿ ಲಕ್ಷಾಂತರ ಭಾರತೀಯರನ್ನು ಮನೆಗೆ ತಲುಪಿಸಿದ್ದಾರೆ, ಅವರ ಪ್ರೀತಿಪಾತ್ರರನ್ನು ಭೇಟಿಯಾಗಲು ಸಹಾಯ ಮಾಡಿದ್ದಾರೆ, ಅವರ ಇಡೀ ಕುಟುಂಬವನ್ನು ರಕ್ಷಿಸಿದ್ದಾರೆ ಎಂದು ಬಣ್ಣಿಸಿದೆ.

ಸೋನು ಸೂದ್ ಅವರ ಸಹಾಯಕ್ಕೆ ಧನ್ಯವಾದ ಹೇಳಲು ಅನ್ಯ ಮಾರ್ಗವಿಲ್ಲ, ಅವರ ಅದ್ಭುತ ಕೊಡುಗೆಯನ್ನು ಗೌರವಿಸಲು ನಾವು ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸ್ಪೈಸ್ ಜೆಟ್ ಬರೆದುಕೊಂಡಿದೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರ.. ಸಚಿವ ಆದಿತ್ಯ ಠಾಕ್ರೆಗೂ ತಗುಲಿದ ಸೋಂಕು!

ABOUT THE AUTHOR

...view details