ನವದೆಹಲಿ:ಮಹಿಳಾ ಕ್ಯಾಬಿನ್ ಸಿಬ್ಬಂದಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣ ಸ್ಪೈಸ್‌ಜೆಟ್ ವಿಮಾನದಲ್ಲಿ ಪ್ರಯಾಣಿಕನೊಬ್ಬನನ್ನು ಕೆಳಗಿಳಿಸಲಾಗಿದೆ ಎಂದು ಸೋಮವಾರ ಏರ್‌ಲೈನ್ ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಪುರುಷ ಪ್ರಯಾಣಿಕರೊಬ್ಬರು ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ನಂತರ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರು ಮಾತಿನ ಚಕಮಕಿಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಬಳಿಕ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಲಾಗಿದೆ.
"ಜನವರಿ 23, 2023 ರಂದು, ಸ್ಪೈಸ್‌ಜೆಟ್ ವೆಟ್-ಲೀಸ್ಡ್ ಕೊರೆಂಡನ್ ವಿಮಾನವು SG-8133 (ದೆಹಲಿ-ಹೈದರಾಬಾದ್) ಕಾರ್ಯನಿರ್ವಹಿಸಲು ನಿಗದಿಯಾಗಿತ್ತು. ದೆಹಲಿಯಲ್ಲಿ ಬೋರ್ಡಿಂಗ್ ಸಮಯದಲ್ಲಿ, ಒಬ್ಬ ಪ್ರಯಾಣಿಕರು ಅಶಿಸ್ತಿನ ಮತ್ತು ಅನುಚಿತ ರೀತಿಯಲ್ಲಿ ವರ್ತಿಸಿದರು, ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ಮತ್ತು ತೊಂದರೆ ಉಂಟುಮಾಡಿದರು. ಸಿಬ್ಬಂದಿ ಪಿಐಸಿ ಮತ್ತು ಭದ್ರತಾ ಸಿಬ್ಬಂದಿಗೆ ಇದೇ ವಿಷಯ ತಿಳಿಸಿದರು. ಜೊತೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಮತ್ತು ಸಹ-ಪ್ರಯಾಣಿಕನನ್ನು ಆಫ್‌ಲೋಡ್ ಮಾಡಿ ಭದ್ರತಾ ತಂಡಕ್ಕೆ ಹಸ್ತಾಂತರಿಸಲಾಗಿದೆ, ”ಎಂದು ಏರ್‌ಲೈನ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಪ್ರಯಾಣಿಕರೊಬ್ಬರು ಸಿಬ್ಬಂದಿಯೊಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಸಹ ಪ್ರಯಾಣಿಕರು ವಿಮಾನದಲ್ಲಿ ಇಕ್ಕಟ್ಟಿನ ಜಾಗದಲ್ಲಿ ಆ ರೀತಿ ಆಗಿದೆ ಉದ್ದೇಶದಿಂದ ಕೃತ್ಯ ಎಸಗಿಲ್ಲ ಎಂದು ಹೇಳಿದ್ದಾರೆ. ಪ್ರಯಾಣಿಕ ನಂತರ ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ. ಆದರೆ ವಿಮಾನದಲ್ಲಿ ಗಲಾಟೆ ತಪ್ಪಿಸುವ ಸಲುವಾಗಿ ಅವರನ್ನು ಕೆಳಗಿಳಿಸಿದ್ದರು.
ಈ ರೀತಿಯ ಪ್ರಕರಣ:ಈ ತಿಂಗಳ ಆರಂಭದಲ್ಲಿ ಜನವರಿ 9 ರಂದು, ಡಿಸೆಂಬರ್ 6 ರಂದು ಪ್ಯಾರಿಸ್‌ನಿಂದ ನವದೆಹಲಿಗೆ ಏರ್‌ಲೈನ್ಸ್ ವಿಮಾನ AI-142 ನಲ್ಲಿ ಸಂಭವಿಸಿದ ಪ್ರಯಾಣಿಕರ ಅನುಚಿತ ವರ್ತನೆಯ ಎರಡು ಘಟನೆಗಳ ನಂತರ, ನಾಗರಿಕ ವಿಮಾನಯಾನ ಮಹಾನಿರ್ದೇಶಕರು (DGCA) ಏರ್ ಇಂಡಿಯಾದ ಅಕೌಂಟೆಬಲ್ ಮ್ಯಾನೇಜರ್‌ಗೆ ಶೋಕಾಸ್ ನೋಟಿಸ್ ನೀಡಿದರು. "ತಮ್ಮ ನಿಯಂತ್ರಕ ಕಟ್ಟುಪಾಡುಗಳ ಉಲ್ಲಂಘಿಸಿದರೆ ಅವರ ವಿರುದ್ಧ ಏಕೆ ಜಾರಿ ಕ್ರಮ ತೆಗೆದುಕೊಳ್ಳಬಾರದು" ಎಂದು ವಿಮಾನಯಾನ ಸಂಸ್ಥೆ ಶೋಕಾಸ್ ನೋಟಿಸ್ನಲ್ಲಿ ಹೇಳಿದೆ.