ನವದೆಹಲಿ:ದೇಶದ ದೊಡ್ಡ ವಿಮಾನ ಸಂಸ್ಥೆಗಳಲ್ಲಿ ಒಂದಾದ ಸ್ಪೈಸ್‌ಜೆಟ್ ಏರ್ಲೈನ್ಸ್ ವಿಮಾನಗಳಲ್ಲಿ ಪದೇ ಪದೆ ತಾಂತ್ರಿಕ ದೋಷ ಉಂಟಾಗಿ ಭಾರೀ ಟೀಕೆಗೆ ಗುರಿಯಾಗಿದೆ. ಇಂದು ಕೂಡ ದುಬೈನಿಂದ ಮಧುರೈಗೆ ತೆರಳಬೇಕಿದ್ದ ಬೋಯಿಂಗ್ ಬಿ737 ಮ್ಯಾಕ್ಸ್ ವಿಮಾನದ ಮುಂದಿನ ಚಕ್ರದಲ್ಲಿ ದೋಷ ಕಂಡು ಬಂದಿದ್ದು, ತಡವಾಗಿ ಹಾರಾಟ ನಡೆಸಿದೆ. ಇದು 24 ದಿನಗಳಲ್ಲಿ 9ನೇ ಘಟನೆಯಾಗಿದೆ.
ದುಬೈನಿಂದ ಮಧುರೈ ಮಾರ್ಗವಾಗಿ ಹಾರಾಟ ನಡೆಸಬೇಕಿದ್ದ ವಿಮಾನವನ್ನು ಇಂಜಿನಿಯರ್ ಪರಿಶೀಲನೆ ನಡೆಸಿದ ವೇಳೆ ಮುಂದಿನ ಭಾಗದ ಚಕ್ರ ಸಹಜತೆಗಿಂತಲೂ ಸ್ಪಲ್ಪ ಕುಗ್ಗಿದಂತೆ ಕಂಡು ಬಂದಿದೆ. ಇದರಿಂದ ವಿಮಾನದ ಹಾರಾಟಕ್ಕೆ ತಡೆ ನೀಡಿ, ಬಳಿಕ ಮುಂಬೈನಿಂದ- ಮಧುರೈಗೆ ವಿಮಾನದ ವ್ಯವಸ್ಥೆ ಮಾಡಲಾಗಿದೆ.