ಕಾಜಿರಂಗ (ಅಸ್ಸೋಂ):ಅಸ್ಸೋಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ವೇಗವಾಗಿ ಬಂದ ಟ್ರಕ್ವೊಂದಕ್ಕೆ ಘೇಂಡಾಮೃಗ ಗುದ್ದಿ ಗಾಯಗೊಂಡ ಘಟನೆ ನಡೆದಿದೆ. ಅದೃಷ್ಟವತಾಶ್ ಈ ಅಪಘಾತದಲ್ಲಿ ಘೇಂಡಾಮೃಗ ಬದುಕುಳಿದಿದೆ. ಇತ್ತ, ಟ್ರಕ್ ಚಾಲಕನಿಗೆ ದಂಡ ವಿಧಿಸಲಾಗಿದೆ.
ರಾಷ್ಟ್ರೀಯ ಉದ್ಯಾನವನದ ಹಲ್ದಿಬರಿಯಲ್ಲಿ ಕಾಡಿನಿಂದ ರಸ್ತೆಗೆ ಘೇಂಡಾಮೃಗ ಬಂದಿದೆ. ಈ ವೇಳೆ ವೇಗವಾಗಿ ಟ್ರಕ್ವೊಂದು ಬಂದಿದ್ದು, ಅದಕ್ಕೆ ಗುದ್ದಿದೆ. ಇದರಿಂದ ಘೇಂಡಾಮೃಗದ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ರಸ್ತೆಯಲ್ಲೇ ಕುಸಿದಿದೆ. ನಂತರ ಪ್ರಾಣ ಭಯದಲ್ಲೇ ಮತ್ತೆ ಕಾಡಿನೊಳಗೆ ಓಡಿದೆ. ಇದರ ದೃಶ್ಯಗಳು ಅರಣ್ಯ ಇಲಾಖೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಈ ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿರುವ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಘೇಂಡಾಮೃಗಗಳು ನಮ್ಮ ವಿಶೇಷ ಸ್ನೇಹಿತರು. ನಾವು ಅವುಗಳ ಸ್ಥಳದಲ್ಲಿ ಯಾವುದೇ ಉಲ್ಲಂಘನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಹಲ್ದಿಬರಿಯಲ್ಲಿ ನಡೆದಿರುವುದು ದುರದೃಷ್ಟಕರ ಘಟನೆ. ಘೇಂಡಾಮೃಗ ಬದುಕುಳಿದಿದೆ. ವಾಹನವನ್ನು ತಡೆದು ದಂಡ ವಿಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.