ಹಂದ್ವಾರ(ಜಮ್ಮು-ಕಾಶ್ಮೀರ):ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎಂಬ ಕನಸು ಕಾಣುವ ವಿದ್ಯಾರ್ಥಿಗಳಿಗೆ ನೂರಾರು ವಿಘ್ನ ಎದುರಾದರೂ, ಅವುಗಳನ್ನ ಮೆಟ್ಟಿ ನಿಲ್ಲುತ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಜಮ್ಮು - ಕಾಶ್ಮೀರ ಹಂದ್ವಾರದ ವಿದ್ಯಾರ್ಥಿ ಪರ್ವೇಜ್. ತಾನು ಕಾಣುತ್ತಿರುವ ಕನಸು ನನಸು ಮಾಡುವ ಉದ್ದೇಶದಿಂದ ನಿತ್ಯ ಎರಡು ಕಿಲೋ ಮೀಟರ್ ಒಂಟಿ ಕಾಲಿನಲ್ಲೇ ನಡೆದುಕೊಂಡು ಶಾಲೆಗೆ ಬರುತ್ತಾನೆ.
ಶಿಕ್ಷಣ ಪಡೆದುಕೊಂಡು, ಸರ್ಕಾರಿ ಅಧಿಕಾರಿಯಾಗುವ ಕನಸು ಕಾಣುತ್ತಿರುವ ವಿದ್ಯಾರ್ಥಿ ಪರ್ವೇಜ್ ನಿತ್ಯ ಎರಡು ಕಿಲೋ ಮೀಟರ್ ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಾನೆ. ನೌಗಾಮ್ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿ, ಚಿಕ್ಕ ವಯಸ್ಸಿನಲ್ಲೇ ಬೆಂಕಿ ಅನಾಹುತದಿಂದಾಗಿ ತನ್ನ ಒಂದು ಕಾಲು ಕಳೆದುಕೊಳ್ಳುತ್ತಾನೆ. ಆದರೆ, ನಿತ್ಯ ಇತರ ವಿದ್ಯಾರ್ಥಿಗಳ ರೀತಿಯಲ್ಲೇ ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುತ್ತಾನೆ.
2 ಕಿ.ಮೀ ಒಂಟಿ ಕಾಲಲ್ಲಿ ನಡೆದ ಬರುವ ವಿದ್ಯಾರ್ಥಿ ಇದನ್ನೂ ಓದಿ:ಒಂದೇ ಕಾಲಲ್ಲಿ ಕಿಲೋಮೀಟರ್ ನಡೆದು ಶಾಲೆಗೆ ಬರುವ ವಿದ್ಯಾರ್ಥಿನಿ.. ದಿವ್ಯಾಂಗ ಸೀಮಾ ಎಲ್ಲರಿಗೂ ಸ್ಫೂರ್ತಿ..
ಈ ಬಗ್ಗೆ ಮಾತನಾಡಿರುವ 14 ವರ್ಷದ ವಿದ್ಯಾರ್ಥಿ, ಪ್ರತಿದಿನ ಎರಡು ಕಿಲೋ ಮೀಟರ್ ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಬರುತ್ತೇನೆ. ಸರಿಯಾದ ರಸ್ತೆ ಇಲ್ಲ. ಕೃತಕ ಕಾಲಿನ ವ್ಯವಸ್ಥೆ ಆದರೆ ನಡೆಯುವ ಸಾಮರ್ಥ್ಯ ಪಡೆದುಕೊಳ್ಳಲಿದ್ದೇನೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಆಸೆ ತುಂಬಾ ಇದೆ. ಸಮಾಜ ಕಲ್ಯಾಣ ಇಲಾಖೆ ಈಗಾಗಲೇ ಗಾಲಿಕುರ್ಚಿ ನೀಡಿದೆ. ಆದರೆ, ರಸ್ತೆ ಸರಿಯಾಗಿ ಇಲ್ಲದ ಕಾರಣ ತೆಗೆದುಕೊಂಡು ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾನೆ. ಕೃತಕ ಕಾಲು ನೀಡುವಂತೆ ಸರ್ಕಾರಕ್ಕೆ ಮನವಿ ಸಹ ಮಾಡಲಾಗಿದೆ ಅಂತಿದ್ದಾನೆ ಈ ವಿದ್ಯಾರ್ಥಿ.
ವಿದ್ಯಾರ್ಥಿಗೆ ಹರಿದು ಬಂದ ನೆರವಿನ ಹಸ್ತ:ವಿದ್ಯಾರ್ಥಿ ನಿತ್ಯ ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಬರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಜೈಪುರ್ದ ಫುಟ್ ಯುಎಸ್ಎ ಅಧ್ಯಕ್ಷ ಪ್ರೇಮ್ ಭಂಡಾರಿ ಸಹಾಯ ಮಾಡಲು ಮುಂದಾಗಿದ್ದಾರೆ. ಜಮ್ಮು-ಕಾಶ್ಮೀರದ ವಿದ್ಯಾರ್ಥಿಗೆ ಉಚಿತವಾಗಿ ಕೃತಕ ಕಾಲು ನೀಡುವ ಭರವಸೆ ನೀಡಿದ್ದಾರೆ. ಜೈಪುರ್ ಫುಟ್ ಒಂದು ಎನ್ಜಿಒ ಕಂಪನಿಯಾಗಿದ್ದು, ಅಂಗವಿಕಲರಿಗೆ, ಆರ್ಥಿಕವಾಗಿ ಹಿಂದುಳಿದವರು ಹಾಗೂ ಬಡ ಮಕ್ಕಳಿಗೆ ಸಹಾಯ ಮಾಡುವ ಕೆಲಸ ಮಾಡ್ತಿದ್ದು, ಇದೀಗ ವಿದ್ಯಾರ್ಥಿಗೆ ಸಹಾಯ ಮಾಡಲು ನಿರ್ಧರಿಸಿದೆ.
ಜಮ್ಮು-ಕಾಶ್ಮೀರದ ಹಂದ್ವಾರ ವಿದ್ಯಾರ್ಥಿ ಪರ್ವೇಜ್ ಕಳೆದ ಕೆಲ ದಿನಗಳ ಹಿಂದೆ ಬಿಹಾರದ ಜುಮುಯಿಹಯ ವಿದ್ಯಾರ್ಥಿನಿ ಸೀಮಾ ಕೂಡ ನಿತ್ಯ 1 ಕಿಲೋ ಮೀಟರ್ ಒಂದೇ ಕಾಲಿನಲ್ಲಿ ನಡೆದುಕೊಂಡು ಬರುವ ವಿಡಿಯೋ ವೈರಲ್ ಆಗಿತ್ತು. ಆಕೆಗೆ ನಟ ಸೋನು ಸೂದ್ ಸೇರಿದಂತೆ ಅನೇಕರು ಸಹಾಯ ಹಸ್ತ ಚಾಚಿದ್ದರು.