ಕರ್ನಾಟಕ

karnataka

ETV Bharat / bharat

ಒಡಿಶಾದಲ್ಲಿ ವಿನ್ಯಾಸಗೊಂಡಿದೆ ವಿಶೇಷ ರೋವರ್​.. ನಾಸಾದ ಮುಂದಿನ ಮಿಷನ್​​​​​ಗೆ ಹ್ಯೂಮನ್ ರೋವರ್ ಸಿದ್ಧ - ಒಡಿಶಾ ತಂಡ

ಒಡಿಶಾ ತಂಡವು ಎಂಟು ತಿಂಗಳ ಕಾಲ ಕೆಲಸ ಮಾಡಿದ ನಂತರ ನಾಸಾದ ಮಾನವ ಪರಿಶೋಧನಾ ಮಿಷನ್​ಗಾಗಿ ಈ ರೋವರ್ ಅನ್ನು ಸಿದ್ಧಪಡಿಸಿದೆ. ಈ ರೋವರ್ ನಾಲ್ಕು ಚಕ್ರಗಳನ್ನು ಹೊಂದಿದ್ದು, ಇಬ್ಬರು ವ್ಯಕ್ತಿಗಳು ಅದರ ಮೇಲೆ ಕುಳಿತುಕೊಳ್ಳಲು ಅವಕಾಶವಿದೆ.

special-rover-designed-in-odisha
ಒಡಿಶಾದಲ್ಲಿ ವಿನ್ಯಾಸಗೊಂಡಿದೆ ವಿಶೇಷ ರೋವರ್

By

Published : Apr 26, 2021, 6:04 AM IST

ಭುವನೇಶ್ವರ್ (ಒಡಿಶಾ): ಇಲ್ಲದನ ಯುವ ಪ್ರತಿಭೆಗಳು ಸೇರಿ ರೋವರ್​ವೊಂದನ್ನು​ ವಿನ್ಯಾಸಗೊಳಿಸಿದ್ದಾರೆ. ಈ ರೋವರ್​ನ ಪ್ರಾಯೋಗಿಕ ಪರೀಕ್ಷೆ ನಡೆಸಿದ ತಂಡ ನಾಸಾದ ಗ್ರೀನ್​ ಸಿಗ್ನಲ್​ಗಾಗಿ ಕಾಯುತ್ತಿದೆ. ರೋವರ್ ಫಾರ್ ನಾಸಾ ಹ್ಯೂಮನ್ ರೋವರ್ ಎಕ್ಸ್‌ಫ್ಲೋರೇಶನ್ ಚಾಲೆಂಜ್​ನಲ್ಲಿ ಈ ರೋವರ್​ ಭಾಗಿಯಾಗಿದೆ.

ಹೌದು, ಕಟಕ್ ಜಿಲ್ಲೆಯ ಯುವ ವಿಜ್ಞಾನಿ ಅನಿಲ್ ಪ್ರಧಾನ್ ಅವರ ನೇತೃತ್ವದಲ್ಲಿ 10 ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡವು ಈ Rover NaPSAT 1.0 ಅನ್ನು ವಿನ್ಯಾಸಗೊಳಿಸಿದ್ದು ಅದು ಚಂದ್ರ ಮತ್ತು ಮಂಗಳನ ಮೇಲ್ಮೈಯಲ್ಲಿ ಇಳಿಯುವ ಸಾಮರ್ಥ್ಯ ಹೊಂದಿದೆ. ಸೈಕಲ್​ ರಿಪೇರಿ ಅಂಗಡಿ, ವೆಲ್ಡಿಂಗ್​ ಶಾಪ್​, ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಈ ವಿದ್ಯಾರ್ಥಿಗಳು ರೋವರ್​ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಯುವ ವಿಜ್ಞಾನಿ ನೇತೃತ್ವದ ವಿದ್ಯಾರ್ಥಿಗಳ ತಂಡದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಒಡಿಶಾದಲ್ಲಿ ವಿನ್ಯಾಸಗೊಂಡಿದೆ ವಿಶೇಷ ರೋವರ್

ಒಡಿಶಾ ತಂಡವು ಎಂಟು ತಿಂಗಳ ಕಾಲ ಕೆಲಸ ಮಾಡಿದ ನಂತರ ನಾಸಾದ ಮಾನವ ಪರಿಶೋಧನಾ ಮಿಷನ್​ಗಾಗಿ ಈ ರೋವರ್ ಅನ್ನು ಸಿದ್ಧಪಡಿಸಿದೆ. ಈ ರೋವರ್ ನಾಲ್ಕು ಚಕ್ರಗಳನ್ನು ಹೊಂದಿದ್ದು, ಇಬ್ಬರು ವ್ಯಕ್ತಿಗಳು ಅದರ ಮೇಲೆ ಕುಳಿತುಕೊಳ್ಳಲು ಅವಕಾಶವಿದೆ. 2024 ರಲ್ಲಿ ನಾಸಾ - ಲೂನಾರ್ ಮಿಷನ್ ಮತ್ತು 2028 ರಲ್ಲಿ ಮಾರ್ಸ್ ಮಿಷನ್‌ನ ಮುಂದಿನ ಕಾರ್ಯಾಚರಣೆಗಳಲ್ಲಿ - ಬಾಹ್ಯಾಕಾಶ ಸಂಸ್ಥೆ ರೋವರ್ ಜೊತೆಗೆ ಓರ್ವ ಮಹಿಳೆ ಮತ್ತು ಓರ್ವ ಪುರುಷನನ್ನು ಕಳುಹಿಸಲಿದೆ.

ಈ ರೋವರ್‌ನ ಸಹಾಯದಿಂದ ಗ್ರಹಗಳಲ್ಲಿ ನೀರು ಮತ್ತು ವಿವಿಧ ಖನಿಜಗಳ ಉಪಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಅದಕ್ಕಾಗಿಯೇ ನಾಸಾ ಸೂಕ್ತವಾದ ರೋವರ್ ಅನ್ನು ಹುಡುಕುತ್ತಿದೆ. ಈ ಹಿಂದೆ ನಾಸಾ ಒಡಿಶಾ ಮಾಡೆಲ್ ರೋವರ್‌ನ ಕಾರ್ಯವೈಖರಿಯನ್ನು ಶ್ಲಾಘಿಸಿದೆ. ಈಗಾಗಲೇ Rover NaPSAT 1.0 ವಿಡಿಯೋವನ್ನು ನಾಸಾಗೆ ಕಳುಹಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಹಲವಾರು ತಂಡಗಳು ಭಾಗವಹಿಸಿವೆ. ಆದರೆ ಒಡಿಶಾದ ಪ್ರೌಢ ಶಾಲಾ ತಂಡವು ಸ್ಪರ್ಧೆಯನ್ನು ಗೆಲ್ಲುವ ಭರವಸೆಯನ್ನು ಹೊಂದಿದೆ. ಏಕೆಂದರೆ ಅದರ ರೋವರ್ ಅನ್ನು ಈ ಮೊದಲೇ ನಾಸಾ ಎರಡು ಬಾರಿ ಪ್ರಶಂಸಿದೆ.

ಈ ಯುವ ವಿಜ್ಞಾನಿಗಳ ತಂಡ ದೇಶಕ್ಕಾಗಿ ತಮ್ಮ ಕೊಡುಗೆ ನೀಡಲು ಬಯಸುತ್ತದೆ. ಅದೊಂದು ವೇಳೆ ಒಡಿಶಾದ ರೋವರ್​ ನಾಸಾದ ಮುಂದಿನ ಮಿಷನ್​ಗೆ ಆಯ್ಕೆಗೊಂಡರೆ ಇಡೀ ವಿಶ್ವದಲ್ಲಿ ಒಡಿಶಾ ರಾಜ್ಯ ಮಾತ್ರವಲ್ಲ, ಇಡೀ ದೇಶವೇ ಕೀರ್ತಿಗೆ ಪಾತ್ರವಾಗಲಿದೆ

ABOUT THE AUTHOR

...view details