ಆಗ್ರಾ(ಉತ್ತರ ಪ್ರದೇಶ):ಬುಧವಾರ ಭಾರತದ ಚಂದ್ರಯಾನ-3 ನೌಕೆಯು ಚಂದ್ರನಂಗಳದಲ್ಲಿ ಲ್ಯಾಂಡಾಗಲಿದೆ. 'ವಿಕ್ರಮ್'ನ ಯಶಸ್ವಿಗಾಗಿ ಆಗ್ರಾದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗಿದೆ. ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳದದಲ್ಲಿ ಪಾದಸ್ಪರ್ಶ ಮಾಡಲಿ ಎಂದು ಪವಿತ್ರ ಯಮುನಾ ನದಿಯ ಆರ್ಶೀವಾದ ಪಡೆಯುವ ಮೂಲಕ ಪ್ರಾರ್ಥನೆ ಪೂಜೆಗಳನ್ನು ನಡೆಸಲಾಗಿದೆ. ಯಮುನಾ ನದಿಯಲ್ಲಿ ಅಭಿಮಾನಿಗಳು ಭಾನುವಾರ ವಿಶೇಷ "ಹವನ ಪೂಜೆ" ಮಾಡಿದ್ದಾರೆ.
ಪೂಜೆ ಬಳಿಕ ಪ್ರಾರ್ಥನ ಕಾರ್ಯಕ್ರಮ ಆಯೋಜಿಸಿದ್ದ ರಾಹುಲ್ ರಾಜ್ ಮಾತನಾಡಿ, " ಕಳೆದ ಬಾರಿ ನಾವು ಚಂದ್ರಯಾನದಲ್ಲಿ ವಿಫಲರಾಗಿದ್ದೇವೆ. ಆದರೆ, ಈ ಬಾರಿ ಆಗಸ್ಟ್ 23 ರಂದು ಭಾರತವು ಯಶಸ್ವಿಯಾಗಬೇಕು. ಈ ಯಶಸ್ವಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಪರಾಕ್ರಮದೊಂದಿಗೆ ನಮ್ಮ ದೈವಿಕ ಶಕ್ತಿಗಳು ಬೇಕಾಗುತ್ತವೆ. ಆ ಕಾರಣಕ್ಕಾಗಿ ನಾವು ಯಾವ ಅಡೆತಡೆಯಾಗದಂತೆ ಹವನ ಪೂಜೆ ಮಾಡಿದ್ದೇವೆ" ಎಂದಿದ್ದಾರೆ.
ಇನ್ನು ಯಮುನಾ ನದಿಯ ಉದ್ದಕ್ಕೂ ಇರುವಂತಹ ಎತ್ಮೌದ್ದೌಲಾದ ವ್ಯೂ ಪಾಯಿಂಟ್ ಪಾರ್ಕ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಾರ್ಥನೆ ಮತ್ತು ಪೂಜೆಯಲ್ಲಿ ಭಾಗವಹಿಸಿದರು. ಪೂಜಾ ನಂತರ ರಿವರ್ ಕನೆಕ್ಟ್ ಪ್ರಚಾರಕ ದೇವಶಿಶ್ ಭಟ್ಟಾಚಾರ್ಯ ಅವರು, ಈ ಪೂಜೆಯಿಂದ ನಮ್ಮ ದೇವರು ಸಂತೋಷ ಪಡುತ್ತಾರೆ. ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಸುರಕ್ಷಿತವಾಗಿ ಇಳಿಯಲು ಅನುಕೂಲಕರವಾದ ಸ್ಥಿತಿಯನ್ನು ದೇವರು ಸೃಷ್ಟಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಭಾರತವು ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸದಾಗಿ ಛಾಪು ಮೂಡಿಸಲು ನಾವೆಲ್ಲರು ಬಯಸುತ್ತೇವೆ ಎಂದು ಚಂದ್ರಯಾನ ಯಶಸ್ವಿಯಾಗುವ ಕುರಿತು ಉತ್ಸಾಹ ವ್ಯಕ್ತಪಡಿಸಿದರು.