ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್‌ನ ಗರ್ಖೇಡಾ ಪ್ರದೇಶದಲ್ಲಿ ಸಾಕು ನಾಯಿಗಳಿಗಾಗಿ ಸಲೂನ್ ಅನ್ನು ಸ್ಥಾಪಿಸಲಾಗಿದೆ. ನಾಯಿಗಳಿಗೆ ಸ್ನಾನ, ಕೂದಲು ಕತ್ತರಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಈ ಸಲೂನ್‌ನಲ್ಲಿ ನಾಯಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ನಾಯಿಗಳ ಆರೈಕೆಗಾಗಿ ಈ ಸಲೂನ್ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ನಾಯಿಗಳನ್ನು ನೋಡಿಕೊಳ್ಳುವಾಗ ನೈರ್ಮಲ್ಯವು ಮುಖ್ಯವಾಗಿದೆ. ಆದರೆ, ಹಲವರಿಗೆ ಇದು ಸಾಧ್ಯವಾಗುತ್ತಿಲ್ಲ. ಅಂತಹ ಶ್ವಾನ ಪ್ರಿಯರಿಗಾಗಿ ಈ ಸಲೂನ್‌ನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದೊಡ್ಡ ಟಬ್ ಇಡಲಾಗಿದ್ದು, ಇಲ್ಲಿರುವ ಸಿಬ್ಬಂದಿ ನಾಯಿಗೆ ಶ್ಯಾಂಪೂ, ಸೋಪು ಹಚ್ಚಿ ಸ್ನಾನ ಮಾಡಿಸುತ್ತಾರೆ.