ಚಂದೀಗಢ:ಜನತೆಯಲ್ಲಿ ಲಸಿಕೆ ಪಡೆಯುವ ಹಿಂಜರಿಕೆಯ ಭಾವನೆಯನ್ನು ಹೋಗಲಾಡಿಸಲು ಪಂಜಾಬ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಶೇ 100ರಷ್ಟು ಲಸಿಕಾಕರಣ ಸಾಧಿಸುವ ಗ್ರಾಮಗಳಿಗೆ ತಲಾ 10 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.
ಕೋವಿಡ್ ಹೋರಾಟದಲ್ಲಿ ಪಂಚರು ಹಾಗೂ ಸರಪಂಚರು ಮುಂಚೂಣಿಯಲ್ಲಿ ನಿಲ್ಲಬೇಕೆಂದು ಕರೆ ನೀಡಿರುವ ಸಿಎಂ, ಜನತೆ ಕೋವಿಡ್ ಪರೀಕ್ಷೆಗೊಳಗಾಗುವಂತೆ ಹಾಗೂ ಲಸಿಕೆ ಪಡೆಯಲು ಮುಂದಾಗುವಂತೆ ಅವರನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡಿದ್ದಾರೆ.