ಹೊಶಿಯಾರ್‌ಪುರ, ಪಂಜಾಬ್: ಈ ಗ್ರಾಮಕ್ಕೆ ಹೋದರೆ ನಾವು ದೊಡ್ಡ ನಗರದ ಯಾವುದೇ ಲೇಔಟ್ಗೆ ಬಂದಿದ್ದೇವೆ ಅನ್ನಿಸುವುದು ನಿಜ. ಎತ್ತ ನೋಡಿದರೂ ಸಿಸಿಟಿವಿ, ಒಳಚರಂಡಿ, ಉದ್ಯಾನವನ, ವ್ಯಾಯಾಮ ಶಾಲೆ, ವಿವಿಧ ಆಟದ ಮೈದಾನಗಳು, ಸ್ವಚ್ಛತೆಯ ಅಂದ ಮನಸ್ಸಿಗೆ ಮುದ ನೀಡುತ್ತದೆ.
ಈ ಗ್ರಾಮ ಇರೋದು ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯಲ್ಲಿ. ಇದರ ಹೆಸರು ದಬುರ್ಜಿ ಗ್ರಾಮ ಅಂತ. ಇಲ್ಲಿನ ಜನಸಂಖ್ಯೆ ಕೇವಲ 1400 ಮಾತ್ರ. ಲುಬಾನಾ ಎಂಬ ಸಮುದಾಯಕ್ಕೆ ಸೇರಿದವರು ಹೆಚ್ಚಿದ್ದಾರೆ. ಒಂಥರಾ ಇದು ವಿದೇಶದ ಸಿಂಗಾಪುರ ಇದ್ದಂಗೆ. ಈ ಸುಂದರ ಕಲ್ಪನೆಯ ಪಿತಾಮಹ ಸರಪಂಚ್ ಆದ ಜಸ್ಪೀರ್ ಸಿಂಗ್. ತನ್ನ ಪಂಚಾಯಿತಿ ಅಧಿಕಾರ ಮುಗಿಯುವುದರೊಳಗೆ ಊರನ್ನು ಅಂದಗಾಣಿಸಬೇಕು ಅಂತ ಈತ ಇಷ್ಟೆಲ್ಲಾ ಮಾಡಿದ್ದಾನೆ.
ಊರು ಕಾಯಲು ಸಿಸಿಟಿವಿ ಅಳವಡಿಕೆ:ಗ್ರಾಮಕ್ಕೆ ಭದ್ರತೆ ನೀಡಲು 50 ಕ್ಕೂ ಅಧಿಕ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಗ್ರಾಮ ಸಂಪರ್ಕಿಸುವ ಗುರುದ್ವಾರಕ್ಕೆ 16 ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಹಲವೆಡೆ ಸುಂದರವಾದ ಉದ್ಯಾನಗಳನ್ನು ನಿರ್ಮಿಸಲಾಗಿದೆ.
ಗ್ರಾಮದಲ್ಲಿ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಗ್ರಾಮದ ಎಲ್ಲ ಕೊಳಕು ನೀರನ್ನು ಹೊಂಡದಲ್ಲಿ ಸಂಸ್ಕರಿಸಿ ಅಂತಿಮವಾಗಿ ಅದನ್ನು ಕೆರೆಗೆ ಬಿಡಲಾಗುತ್ತದೆ. ಅಲ್ಲಿಂದ ನೀರನ್ನು ಕೃಷಿಗೂ ಬಳಸಲಾಗುತ್ತದೆ. ಕೆರೆಯ ಸುತ್ತಲೂ ವರ್ಣರಂಜಿತವಾದ ಬೆಂಚುಗಳಿಂದ ಅಲಂಕರಿಸಲಾಗಿದೆ.
ದೇಹದ ಕಸರತ್ತಿಗೆ ಗರಡಿಮನೆಗಳು:ಗ್ರಾಮದ ಮಕ್ಕಳು ಮತ್ತು ಯುವಕರು ಕಟುಮಸ್ತಾದ ದೇಹ ಹೊಂದಲಿ ಎಂದು ಜಿಮ್‌ಗಳು ಮತ್ತು ಕ್ರೀಡೆಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬಾಸ್ಕೆಟ್‌ಬಾಲ್ ಮೈದಾನ ಮತ್ತು ವಾಲಿಬಾಲ್ ಮೈದಾನ ಸಹ ನಿರ್ಮಿಸಲಾಗಿದೆ. ಬಿಡುವಿನ ವೇಳೆಯಲ್ಲಿ ಇಲ್ಲಿ ಆಟವಾಡಲು ಮತ್ತು ವ್ಯಾಯಾಮ ಮಾಡಲು ಇದು ಸಾಧ್ಯವಾಗಿಸಿದೆ.
ದಬುರ್ಜಿ ಗ್ರಾಮವು ಸ್ವಚ್ಛತೆಯಲ್ಲೂ ಕಮ್ಮಿ ಇಲ್ಲ. ಪ್ರತಿ ಮನೆಯಿಂದ ಕಸ ಸಂಗ್ರಹಿಸಲು ಗ್ರಾಮದ ಒಬ್ಬರನ್ನು ನೇಮಿಸಲಾಗಿದೆ. ಯಾರಾದರೂ ಕಸವನ್ನು ರಸ್ತೆಗೆ ಹಾಕಿದರೆ 10 ಸಾವಿರ ರೂಪಾಯಿ ದಂಡ ಬೀಳೋದು ಗ್ಯಾರಂಟಿ. ಕ್ರೀಡೆ ಮತ್ತು ಶಿಕ್ಷಣಕ್ಕೆ ಪ್ರೋತ್ಸಾಹ ಹೆಚ್ಚಿದೆ ಎಂಬುದಕ್ಕೆ ಇಲ್ಲಿನ ಸರ್ಕಾರಿ ಶಾಲೆಯೇ ಸಾಕ್ಷಿ. ಹಳ್ಳಿಯಲ್ಲಿದ್ದರೂ ಈ ಶಾಲೆ ಯಾವುದೇ ಖಾಸಗಿ ಶಾಲೆಗಿಂತ ಏನೂ ಕಡಿಮೆಯಿಲ್ಲ. ವಿಶೇಷ ಅಂದ್ರೆ ಗ್ರಾಮದಲ್ಲಿ ಮಾದಕ ವ್ಯಸನಿಗಳಿಲ್ಲ ಅಂತಾರೆ ಅಧಿಕಾರಿಗಳು.
ಓದಿ:ನನ್ನನ್ನು ಮುಟ್ಟಬೇಡಿ, ನಾನು ಸಲಿಂಗಕಾಮಿ.. ಸುವೇಂದು ಅಧಿಕಾರಿ ಸ್ವಗ್ರಾಮದಲ್ಲಿ ಅವಹೇಳನಕಾರಿ ಪೋಸ್ಟರ್