ಕರ್ನಾಟಕ

karnataka

ETV Bharat / bharat

ವಿಶೇಷ ಜುಬ್ಬ ಧರಿಸುವ ಮೂಲಕ ಮಕ್ಕಳ ಲಸಿಕೆ ಕುರಿತು ವಿಶೇಷ ಜಾಗೃತಿ: ಇವರ ಕಾರ್ಯಕ್ಕೆ ಮೆಚ್ಚಲೇಬೇಕು - ಸಂಪೂರ್ಣ ಮಾಹಿತಿಯನ್ನು ಬರೆದಿರುವ ಜುಬ್ಬ

ಮಕ್ಕಳ ರೋಗಗಳು ಮತ್ತು ಅದರ ಲಸಿಕೆಗಳ ಸಂಪೂರ್ಣ ಮಾಹಿತಿಯನ್ನು ಬರೆದಿರುವ ಜುಬ್ಬವನ್ನು ಅವರು ಧರಿಸಿ ಪ್ರಚಾರ ಆರಂಭಿಸಿದರು.

special-awareness-about-childhood-vaccination-by-wearing-bathinda-chola
ವಿಶೇಷ ಜುಬ್ಬ ಧರಿಸುವ ಮೂಲಕ ಮಕ್ಕಳ ಲಸಿಕೆ ಕುರಿತು ವಿಶೇಷ ಜಾಗೃತಿ

By

Published : Dec 17, 2022, 4:32 PM IST

ಮಕ್ಕಳ ಲಸಿಕೆ ವಿಚಾರದಲ್ಲಿ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕಳೆದ ನಲವತ್ತು ವರ್ಷಗಳಿಂದ ಇಲ್ಲೊಬ್ಬರು ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ. ಮಕ್ಕಳ ಹಲವು ಕಾಯಿಲೆಗಳ ಕುರಿತು ಮಾಹಿತಿ ಒಳಗೊಂಡ ಜುಬ್ಬವನ್ನು ಕಳೆದ ನಾಲ್ಕು ವರ್ಷಗಳಿಂದ ಧರಿಸುವ ಮೂಲಕ ಗಮನ ಸೆಳೆದು, ಅರಿವು ಮೂಡಿಸುತ್ತಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ಗ್ರೇಡ್​ 4 ಉದ್ಯೋಗಿಯಾಗಿದ್ದ ಲಾಲ್​ ಚಂದ್​ ಈ ಜಾಗೃತಿ ಕ್ರಮವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕಾಯಿಲೆಗಳ ವಿರುದ್ಧ ಹೋರಾಡಲು ಮಕ್ಕಳಿಗೆ ಲಸಿಕೆ ಪ್ರಮುಖವಾಗಿದೆ. ಈ ಹಿನ್ನೆಲೆ ಅವರು ಇದರ ಜಾಗೃತಿಗೆ ಮುಂದಾದರು. ಇದಕ್ಕಾಗಿ ಮಕ್ಕಳ ರೋಗಗಳು ಮತ್ತು ಅದರ ಲಸಿಕೆಗಳ ಸಂಪೂರ್ಣ ಮಾಹಿತಿಯನ್ನು ಬರೆದಿರುವ ಜುಬ್ಬವನ್ನು ಅವರು ಧರಿಸಿ ಪ್ರಚಾರ ಆರಂಭಿಸಿದರು.

ಜುಬ್ಬದ ಮೂಲಕ ಸಮಾಜದಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸಲು ಮೊದಲು ಇವರು ಚಿಂತಿಸಿದರು. ಈ ಕುರಿತು ಸಮಾಜದಲ್ಲಿ ಅನೇಕ ಚರ್ಚೆಗಳು ಆದವು. ಆದರೆ, ಅವರ ಈ ಪ್ರಚಾರ ತಂತ್ರಕ್ಕೆ ಅವರ ಕುಟುಂಬ ಬೆಂಬಲ ನೀಡಿತು. ಲಾಲ್​ ಚಂದ್​ ಗ್ರೇಡ್​ 4 ಅಧಿಕಾರಿಯಾಗಿ ನಿವೃತ್ತಿಯಾದ ಬಳಿಕವೂ ಮಕ್ಕಳ ಲಸಿಕೆ ಕುರಿತು ಅವರು ಅನೇಕ ಭಾಷಣ ಮಾಡಿದ್ದು, ಲೇಖನಗಳನ್ನು ಕೂಡ ಬರೆದಿದ್ದಾರೆ.

ಆರೋಗ್ಯದ ಬಗ್ಗೆ ಇವರು ನಿರಂತರವಾಗಿ ಕವನ, ಲಾಲಿಗಳನ್ನು ಬರೆಯುವ ಮೂಲಕ ಸಮಾಜದ ಜನರಿಗೆ ತಿಳಿಸುವ ಯತ್ನ ನಡೆಸುತ್ತಿದ್ದಾರೆ. ಅಲ್ಲದೇ ಪಂಜಾಬಿ ಭಾಷೆಯಲ್ಲಿ ಈ ಕುರಿತು ಸಾಹಿತ್ಯ ಬರೆಯುವುದು ಇವರ ಕನಸಾಗಿದೆ. ಲಸಿಕೆ ಜಾಗೃತಿ ಸೃಷ್ಟಿಸಬೇಕು ಎಂಬುದು ಇವರ ಆಶಯ. ವಿಶ್ವವಿದ್ಯಾಲಯದಲ್ಲಿ ಕ್ರೀಡೆ ಮತ್ತು ಆರೋಗ್ಯ ಸಾಹಿತ್ಯದ ಕೆಲಸವಾಗಬೇಕು ಎನ್ನುತ್ತಾರೆ ಇವರು.

ಇದನ್ನೂ ಓದಿ: ಜಗನ್ನಾಥ ದೇವಾಲಯಕ್ಕೆ ಲಕ್ಷ ರೂಪಾಯಿ ದೇಣಿಗೆ ನೀಡಿದ ಭಿಕ್ಷುಕಿ!

ABOUT THE AUTHOR

...view details