ಭಾರತೀಯ ರಕ್ಷಣಾ ಕ್ಷೇತ್ರದಷ್ಟು ಯಾವುದೇ ಕ್ಷೇತ್ರವು ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ್ ಉಪಕ್ರಮಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಭಾರತೀಯ ನೌಕಾಪಡೆಯ ಹೊಸ ಏರ್ ಕ್ರಾಫ್ಟ್ ಕ್ಯಾರಿಯರ್-ಐಎನ್ಎಸ್ ವಿಕ್ರಾಂತ್. ಕೊಚ್ಚಿನ್ ಶಿಪ್ ಯಾರ್ಡ್ ನಿಂದ ಹೊರಹೊಮ್ಮಿದ ಮೊದಲ ವಿಮಾನವಾಹಕ ಇದಾಗಿದೆ.
ಏರ್ ಕ್ರಾಫ್ಟ್ ಕ್ಯಾರಿಯರ್ ಅನ್ನು 2021 ರ ಅಂತ್ಯ ಮತ್ತು 2022 ಆರಂಭದ ವೇಳೆಗೆ ಕಾರ್ಯಾರಂಭ ಮಾಡಲು ಕಾಯಲಾಗುತ್ತಿದ್ದು, ಈಗಾಗಲೇ ತನ್ನ ಮೊದಲ ಸಮುದ್ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಐದು ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದು:
ಮೊದಲ ಭಾರತೀಯ ವಿಮಾನವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್‌ಗೆ ಧೈರ್ಯಶಾಲಿ ಎಂದು ಹೆಸರಿಡಲಾಗಿದೆ. ಸುಮಾರು 40,000 ಟನ್ ಹಡಗನ್ನು ಸುಮಾರು 30 ವಿಮಾನಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಸುಮಾರು 23,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ಹಡಗು ಅನೇಕ ಖಾಸಗಿ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದೆ. ದೇಶವು ತನ್ನದೇ ಆದ ಯುದ್ಧನೌಕೆಯನ್ನು ನಿರ್ಮಾಣ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಐದು ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ.
ಐಎನ್ಎಸ್ ವಿಕ್ರಾಂತ್ ಯೋಜನೆಯು ಆತ್ಮನಿರ್ಭರ್ ಭಾರತ್ (ಸ್ವಾವಲಂಬಿ ಭಾರತ)ಗೆ ಸ್ಪಷ್ಟವಾದ ಉದಾಹರಣೆಯಾಗಿದೆ ಎಂದು ಇತ್ತೀಚೆಗೆ ರಕ್ಷಣಾ ಇಲಾಖೆ ಹೇಳಿದೆ. ಇದಕ್ಕೆ ಶೇ.75 ರಷ್ಟು ದೇಶೀಯ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳನ್ನು ಬಳಸಲಾಗಿದೆ.
ಮೂರು ಐಫೆಲ್ ಟವರ್ ನಿರ್ಮಾಣ ಮಾಡುವಷ್ಟು ಸ್ಟೀಲ್ ಬಳಕೆ:
ಇದರಲ್ಲಿ 23,000 ಟನ್ ಸ್ಟೀಲ್, 2,500 ಕಿಲೋಮೀಟರ್‌ನಷ್ಟು ಎಲೆಕ್ಟ್ರಿಕಲ್ ಕೇಬಲ್, 150 ಕಿಲೋಮೀಟರ್ ಉದ್ದದ ಪೈಪುಗಳು ಮತ್ತು 2,000 ವಾಲ್ವ್ ಗಳನ್ನು ಬಳಸಲಾಗಿದೆ. ಅದೇ ರೀತಿ, ಆ್ಯಂಕರ್ ಕ್ಯಾಪ್ ಸ್ಟನ್ಸ್, ರಿಜಿಡ್ ಹುಲ್ ಬೋಟ್ಸ್, ಗ್ಯಾಲರಿ ಇಕ್ವಿಪ್ ಮೆಂಟ್, ಏರ್ ಕಂಡೀಶನಿಂಗ್ ಮತ್ತು ರೆಫ್ರಿಜರೇಷನ್ ಪ್ಲಾಂಟ್ಸ್, ಸ್ಟೀರಿಂಗ್ ಗೇರ್ಸ್ ಮತ್ತು 150 ಕ್ಕೂ ಹೆಚ್ಚು ಪಂಪುಗಳು ಹಾಗೂ ಮೋಟರ್ಸ್, ಕಮ್ಯುನಿಕೇಷನ್ ಇಕ್ವಿಪ್ ಮೆಂಟ್, ಶಿಪ್ಸ್ ಕಾಂಬ್ಯಾಟ್ ನೆಟ್ ವರ್ಕ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ಸ್ಟೀಲ್ ಅನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಪೂರೈಕೆ ಮಾಡಿದ್ದರೆ, ಡಿಆರ್ ಡಿಒ ಅಭಿವೃದ್ಧಿಪಡಿಸಿರುವ ಮತ್ತು ತಯಾರಿಸಿರುವ ದೇಶೀಯ ಡಿಎಂಆರ್ 249 ಎ ಮತ್ತು ಬಿ ವಾರ್ ಶಿಪ್ ಗ್ರೇಡ್ ಸ್ಟೀಲ್ ಅನ್ನು ಪೂರೈಸಿದೆ. ನೌಕಾಪಡೆಯ ಅಧಿಕಾರಿಗಳ ಪ್ರಕಾರ ಈ ಹಡಗಿಗೆ ಬಳಸಲಾಗಿರುವ ಸ್ಟೀಲ್ ನಿಂದ ಮೂರು ಐಫೆಲ್ ಟವರ್ ಗಳನ್ನು ನಿರ್ಮಿಸಬಹುದಾಗಿದೆ.
23,000 ಕೋಟಿ ರೂಪಾಯಿ ಹೂಡಿಕೆ:
ಈ ಯುದ್ಧ ಹಡಗು ನಿರ್ಮಾಣಕ್ಕೆ ಲಾರ್ಸನ್ ಅಂಡ್ ತೂಬ್ರೋ ಮೇನ್ ಸ್ವಿಚ್ ಗೇರ್, ಸ್ಟಿಯರಿಂಗ್ ಗೇರ್ ಮತ್ತು ವಾಟರ್ ಟೈಟ್ ಹ್ಯಾಚಸ್ ಅನ್ನು ಪೂರೈಸಿದೆ. ಇದರ ಏರ್ ಕಂಡೀಶನಿಂಗ್ ಮತ್ತು ರೆಫ್ರಿಜರೇಶನ್ ಅನ್ನು ಕಿರ್ಲೋಸ್ಕರ್ ಗ್ರೂಪ್ ತಯಾರಿಸಿದೆ. ನಿಕ್ಕೋ ಎಂಜಿನಿಯರಿಂಗ್ 2,500 ಕಿಲೋಮೀಟರ್ ಉದ್ದದ ಕೇಬಲ್ ಗಳನ್ನು ಒದಗಿಸಿದ್ದರೆ, ಕ್ಯಾರಿಯರ್‌ನ ಇಂಟಗ್ರೇಟೆಡ್ ಪ್ಲಾಟ್ ಫಾರ್ಮ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಭಾರತ್ ಹವೆ ಎಲೆಕ್ಟ್ರಿಕಲ್ ವಿನ್ಯಾಸಗೊಳಿಸಿದೆ. ಗೇರ್ ಬಾಕ್ಸ್‌ಗಳನ್ನು ಎಲೆಕಾನ್ ಎಂಜಿನಿಯರಿಂಗ್ ಅನ್ನು ಗುಜರಾತ್ ಮತ್ತು ಜರ್ಮನಿ ಮೂಲದ ರೆಂಕ್ ಎಜಿ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಹಡಗು ನಿರ್ಮಾಣಕ್ಕೆ 23,000 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೂ, ಈಗಾಗಲೇ ಶೇ.80-85 ರಷ್ಟು ಭಾರತೀಯ ಆರ್ಥಿಕತೆಗೆ ಬಂದಿದೆ ಎಂದು ನೌಕಾಪಡೆ ತಿಳಿಸಿದೆ. ಈ ಯೋಜನೆ ಈಗಾಗಲೇ 2000 ಜನರಿಗೆ ನೇರ ಉದ್ಯೋಗ ನೀಡಿದ್ದರೆ, 40,000 ಕ್ಕೂ ಹೆಚ್ಚು ಜನರಿಗೆ ಪರೋಕ್ಷ ಉದ್ಯೋಗವನ್ನು ನೀಡಿದೆ.
ಭಾರತೀಯ ನೌಕಾ ಇತಿಹಾಸಕ್ಕೆ ಈ ಹಡಗು ಒಂದು ಮೈಲಿಗಲ್ಲಾಗಲಿದೆ. ಇದು 262 ಮೀಟರ್ ಉದ್ದವಿದ್ದು, 62 ಮೀಟರ್ ಅಗಲವಿದೆ ಹಾಗೂ 14 ಡೆಕ್ ಗಳನ್ನು ಒಳಗೊಂಡಿದೆ. ಇದು ಎನ್ಎಸ್ ವಿಕ್ರಮಾದಿತ್ಯಕ್ಕಿಂತ ಸಾಕಷ್ಟು ದೊಡ್ಡದಾಗಿದೆ.
ನೌಕಾಪಡೆಯ ಪ್ರಕಾರ, ಈ ಹಡಗನ್ನು ಶಾರ್ಟ್ ಟೇಕಾಫ್, ಬಟ್ ಅರೆಸ್ಟೆಡ್ ರಿಕವರಿ(STOBAR) ಗೆ ಬಳಸಲಾಗುತ್ತದೆ ಮತ್ತು 1500 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಇದು 15,000 ಕಿಲೋಮೀಟರ್ ರೇಂಜ್ ಅನ್ನು ಹೊಂದಿದೆ ಮತ್ತು 150 ಮೀಟರ್ ವರೆಗೆ ಟೇಕಾಫ್ ನೊಂದಿಗೆ 14 ಡೆಕ್ ಗಳನ್ನು ಒಳಗೊಂಡಿರುತ್ತದೆ. ಇದು ಗ್ಯಾಸ್ ಟರ್ಬೈನ್ ಎಂಜಿನ್ ಅನ್ನು ಬಳಸುತ್ತದೆ. ಇದರಲ್ಲಿ ನಾಲ್ಕು ಗ್ಯಾಸ್ ಟರ್ಬೈನ್ ಗಳಿವೆ.
ಇದು 30 knots(55 ಕಿಲೋಮೀಟರ್) ವೇಗವನ್ನು ತಲುಪುವ ಸಾಧ್ಯತೆ ಇದೆ. ಇದರ ಸಹಿಷ್ಣುತೆಯು 18 knots (32 ಕಿಲೋಮೀಟರ್) ವೇಗದಲ್ಲಿ 7500 ನಾಟಿಕಲ್ ಮೈಲುಗಳಾಗಲಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.
ವಿಕ್ರಾಂತ್ ಎಂದರೇನು?
ವಿಕ್ರಾಂತ್ ಎಂದರೆ ಧೈರ್ಯಶಾಲಿ ಮತ್ತು ವಿಮಾನವಾಹಕ ನೌಕೆಯ ಧ್ಯೇಯವೆಂದರೆ ಜಯೇನ ಸಂ ಯುಧಿ ಸೊರ್ದ, ಇದು ಋಗ್ವೇದದ ಒಂದು ಸ್ತೋತ್ರವಾಗಿದೆ. ಅಂದರೆ, `ನನ್ನ ವಿರುದ್ಧ ಹೋರಾಡುವವರನ್ನು ನಾನು ಸೋಲಿಸುತ್ತೇನೆ ಎಂದರ್ಥ.