ಕೊಲ್ಲಂ:ಈಟಿ ಮೀನುಗಾರಿಕೆ ಎಂಬುದು ಸಾಂಪ್ರದಾಯಿಕ ಪದ್ದತಿ. ಆಳ ನೀರಿನಲ್ಲಿ ಮೀನನ್ನು ಬೇಟೆಯಾಡುವ ಈ ಈಟಿ ಮೀನುಗಾರಿಕೆಗೆ ಕೊಲ್ಲಂನ ಯುವಕ ಶಿಬು ಜೋಸೆಫ್ ಇದೀಗ ಆಧುನಿಕ್ ಟಚ್ ನೀಡಿದ್ದಾರೆ. ಆಧುನಿಕ ಈಟಿಯಂತಹ ಗನ್ಗಳನ್ನು ಹಿಡಿದು ಆಳ ಸಮುದ್ರದಲ್ಲಿ ಮೀನುಗಳ ಬೇಟೆ ನಡೆಸುತ್ತಾರೆ. ವೃತ್ತಿಯಲ್ಲಿ ಸ್ಕೂಬಾ ಡೈವರ್ ಆಗಿರುವ ಶಿಬು ಈಟಿ ಮೀನುಗಾರಿಕೆಯಲ್ಲೂ ಪರಿಣಿತರಾಗಿದ್ದಾರೆ.
ಈ ಕುರಿತು ತಮ್ಮ ಅನುಭವ ಹಂಚಿಕೊಂಡಿರುವ ಶಿಬು, ವೃತ್ತಿಯಲ್ಲಿ ನಾನು ಆಳ ಸಮುದ್ರದ ಸ್ಕೂಬಾ ಡೈವರ್ ಆಗಿದ್ದೇನೆ. ಇದಾದ ಬಳಿಕ ನಾನು ಈಟಿ ಮೀನುಗಾರಿಕೆಯಲ್ಲಿ ಪರಿಣಿತಿ ಪಡೆದಿದ್ದೇನೆ. ಹಲವು ವರ್ಷಗಳ ಅಭ್ಯಾಸದಿಂದ ನಾನು ಆತ್ಮವಿಶ್ವಾಸದಿಂದ ಇದನ್ನು ಮಾಡುತ್ತಿದ್ದು, ಈ ಕಾರ್ಯವನ್ನು ಆನಂದಿಸುತ್ತಿದ್ದೇನೆ. ಈ ಈಟಿ ಮೀನುಗಾರಿಕೆಯನ್ನು ಜನರು ಯಾವುದೇ ತರಬೇತಿ ಅಥವಾ ಪರಿಣಿತರ ಸಲಹೆ ಇಲ್ಲದೇ ಅನುಸರಿಸುವುದು ತಪ್ಪು ಎಂದು ನಾನು ಸಾರ್ವಜನಿಕರಿಗೆ ಸಲಹೆ ನೀಡುತ್ತೇನೆ. ನೀರಿ ಹರಿವು ಮತ್ತು ನೀರಿನ ಆಳದ ಪರಿಚಯ ಇರುವವರು ಈ ಸಾಹಸವನ್ನು ಅನುಸರಿಸಬಹುದಾಗಿದೆ.