ಕರ್ನಾಟಕ

karnataka

ETV Bharat / bharat

Delhi Gang rape​.. ಸ್ಪಾನಲ್ಲಿ ಯುವತಿ ಮೇಲೆ ಮಾಲೀಕ, ಗ್ರಾಹಕನಿಂದ ಅತ್ಯಾಚಾರ - ದೆಹಲಿಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಮಸಾಜ್ ನೆಪ ಹೇಳಿ ಸ್ಪಾ ಸೆಂಟರ್​ಗೆ ಯುವತಿಯೋರ್ವಳನ್ನ ಕರೆಯಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

Gang Rape in Delhi
Gang Rape in Delhi

By

Published : Aug 6, 2022, 3:10 PM IST

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಗ್ಯಾಂಗ್​ರೇಪ್​​ ಪ್ರಕರಣ ಬೆಳಕಿಗೆ ಬಂದಿದೆ. ಸ್ಪಾ ಸೆಂಟರ್​​ನಲ್ಲಿ ಕೆಲಸ ಮಾಡ್ತಿದ್ದ 22 ವರ್ಷದ ಯುವತಿ ಮೇಲೆ ಮಾಲೀಕ ಹಾಗೂ ಗ್ರಾಹಕ ಸೇರಿ ದುಷ್ಕೃತ್ಯವೆಸಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್​​ ಟ್ವೀಟ್ ಮಾಡಿದ್ದಾರೆ.

ಮಸಾಜ್ ಮಾಡಲು ಸ್ಪಾ ಸೆಂಟರ್​ಗೆ ಯುವತಿಯನ್ನ ಕರೆಸಿಕೊಳ್ಳಲಾಗಿದ್ದು, ಈ ವೇಳೆ ಮತ್ತು ಬರುವ ಪದಾರ್ಥ ನೀಡಿ, ಪ್ರಜ್ಞಾಹೀನಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಆಕೆಯ ಮೇಲೆ ಇಬ್ಬರು ಕಾಮುಕರು ದುಷ್ಕೃತ್ಯವೆಸಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೂರು ದಾಖಲು ಮಾಡಿಕೊಂಡಿರುವ ದೆಹಲಿ ಪೊಲೀಸರು ತನಿಖೆ ಆರಂಭಿಸಿ, ಸ್ಪಾ ಸೆಂಟರ್​ ಮಾಲೀಕ ಹಾಗೂ ಗ್ರಾಹಕನನ್ನು ಬಂಧಿಸಿದ್ದಾರೆ. ಮಸಾಜ್ ಮಾಡುವ ನೆಪದಲ್ಲಿ ಸೆಂಟರ್​​ನಲ್ಲಿ ಅಕ್ರಮ ಮಾಂಸದಂಧೆ ನಡೆಯುತ್ತಿದ್ದ ಬಗ್ಗೆ ತಿಳಿದುಬಂದಿದೆ.

ಪೊಲೀಸ್ ಇಲಾಖೆಗೆ ನೋಟಿಸ್ ಜಾರಿ

ಇದನ್ನೂ ಓದಿರಿ:ಕಾರವಾರ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶುಕ್ರವಾರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ. ಯುವತಿಯನ್ನು ರಕ್ಷಣೆ ಮಾಡಿ, ಈಗಾಗಲೇ ವೈದ್ಯಕೀಯ ಪರೀಕ್ಷೆಗೋಸ್ಕರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಕೇವಲ ಮಹಿಳಾ ಗ್ರಾಹಕರಿಗೆ ಮಸಾಜ್ ಮಾಡಲು 22 ವರ್ಷದ ಯುವತಿಯನ್ನ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಇಲ್ಲಿಗೆ ಆಗಮಿಸುತ್ತಿದ್ದ ಪುರುಷರಿಗೂ ಮಸಾಜ್ ಮಾಡುವಂತೆ ಆಕೆಯ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸ್ ಇಲಾಖೆಗೂ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ABOUT THE AUTHOR

...view details