ಕರ್ನಾಟಕ

karnataka

ETV Bharat / bharat

ಬಿಜೆಪಿ ಸೇರ್ಪಡೆಗೆ ಆಕ್ರೋಶ: ಮುಸ್ಲಿಂ ಯುವಕನ ಚಿಕ್ಕಪ್ಪನಿಗೆ ಎಸ್​​ಪಿ ಕಾರ್ಯಕರ್ತರಿಂದ ಥಳಿತ - ಸಮಾಜವಾದಿ ಪಕ್ಷದ ಕಾರ್ಯಕರ್ತರು

ಸಮಾಜವಾದಿ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆ ಆಗಿರುವುದಕ್ಕಾಗಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Etv Bharat
Etv Bharat

By

Published : Aug 24, 2022, 9:42 PM IST

ಕಾಸ್​​ಗಂಜ್​​(ಉತ್ತರ ಪ್ರದೇಶ):ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದಕ್ಕಾಗಿ ಮುಸ್ಲಿಂ ಯುವಕನ ಚಿಕ್ಕಪ್ಪನ ಮೇಲೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾಸ್​ಗಂಜ್​​​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲಿಯಾ ಭರ್ಗೇನ್​ ಎಂಬುವವರ ಪತ್ನಿ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಅವರು ಕಳೆದ ಕೆಲ ದಿನಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೆಲವರು ಹಲ್ಲೆ ನಡೆಸಿದ್ದು, ಗಾಳಿಯಲ್ಲಿ ಕೆಲ ಸುತ್ತು ಗುಂಡು ಸಹ ಹಾರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವ್ಯಕ್ತಿಯ ಸಂಬಂಧಿ ಜಬ್ಬಾರ್ ಮಾಹಿತಿ ನೀಡಿದ್ದು, ಕಾಲಿಯಾ ಭರ್ಗೇನ್​​ ನಗರ ಪಂಚಾಯತ್​ ಅಧ್ಯಕ್ಷರ ಪತಿಯಾಗಿದ್ದು, ಎಹ್ಸಾನ್​ ಅಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಈ ವೇಳೆ ಕಾಲಿಯಾ ಅವರನ್ನು ಪಕ್ಷ ತೊರೆಯುವಂತೆ ಬ್ಲಾಕ್​ ಮೇಲೆ ಮಾಡಲು ಪ್ರಾರಂಭಿಸಲಾಗಿತ್ತು. ಇದಕ್ಕೆ ನಿರಾಕರಣೆ ಮಾಡಿದಾಗ ಹಲ್ಲೆ ನಡೆಸಲಾಗಿದೆ ಎಂದು ಜಬ್ಬಾರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಜಾರ್ಖಂಡ್​ ಸಿಎಂ ಆಪ್ತನ ನಿವಾಸದ ಮೇಲೆ ಇಡಿ ದಾಳಿ: ಎರಡು AK 47 ರೈಫಲ್​​ ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಸ್​ಪಿ ನಾಯಕ ಅಹ್ಮದ್​ ನಫೀಸ್​​ ಅವರ ಪುತ್ರ ಅಹ್ಮದ್​​ ಹುಸೇನ್​, ಆರೋಪ ಅಲ್ಲಗಳೆದಿದ್ದು, ಉದ್ದೇಶಪೂರ್ವಕವಾಗಿ ರಾಜಕೀಯ ಬಣ್ಣ ಹಚ್ಚಲಾಗ್ತಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಹ್ಮದ್ ತಿಳಿಸಿದ್ದಾರೆ.

ABOUT THE AUTHOR

...view details