ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ನಿಂದ ಟಿಕೆಟ್​ ಪಡೆದಿರುವ ಈ ಮಹಿಳೆ ವಿರುದ್ಧ ಎಸ್​ಪಿ ಸ್ಪರ್ಧಿಸಲ್ಲ: ಅಖಿಲೇಶ್​ ಯಾದವ್​​ - ಆಶಾ ಸಿಂಗ್ ವಿರುದ್ಧ SP ಸ್ಪರ್ಧೆ ಇಲ್ಲ

SP will not field candidate against Asha Singh: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಟಿಕೆಟ್​ ಪಡೆದಿರುವ ಆಶಾ ಸಿಂಗ್​ ಎಂಬುವರು ಕೂಡ ಟಿಕೆಟ್ ಪಡೆದುಕೊಂಡಿದ್ದು, ಇವರು ಸ್ಪರ್ಧಿಸುತ್ತಿರುವ ಕ್ಷೇತ್ರದಿಂದ ಸಮಾಜವಾದಿ ಪಕ್ಷ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ.

SP will not field candidate against Asha singh
SP will not field candidate against Asha singh

By

Published : Jan 15, 2022, 4:27 PM IST

Updated : Jan 16, 2022, 3:12 PM IST

ಲಖನೌ(ಉತ್ತರ ಪ್ರದೇಶ):ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ನಿಂದ ಪ್ರಕಟವಾಗಿರುವ ಮೊದಲ ಪಟ್ಟಿಯಲ್ಲಿ ಶೇ. 40ರಷ್ಟು ಮಹಿಳೆಯರಿಗೆ ಟಿಕೆಟ್​ ನೀಡಲಾಗಿದೆ. ಪ್ರಮುಖವಾಗಿ ಕೇಸ್​ವೊಂದರ ಸಂತ್ರಸ್ತೆಯ ತಾಯಿಯಾಗಿರುವ ಆಶಾ ಸಿಂಗ್​​ ಕೂಡ ಟಿಕೆಟ್​ ಪಡೆದುಕೊಂಡಿದ್ದು, ಬಂಗಾರ್ಮೌ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಆಶಾ ಸಿಂಗ್​​ ಟಿಕೆಟ್​ ಖಚಿತಗೊಳ್ಳುತ್ತಿದ್ದಂತೆ ಅಖಿಲೇಶ್​ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮಹತ್ವದ ನಿರ್ಧಾರ ಕೈಗೊಂಡಿದೆ. ಆಶಾ ಸಿಂಗ್​​ ಸ್ಪರ್ಧಿಸುತ್ತಿರುವ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಮುಂದಾಗಿದೆ.

ಕಾಂಗ್ರೆಸ್​ನಿಂದ ಟಿಕೆಟ್ ಪಡೆದಿರುವ ಆಶಾ ಸಿಂಗ್​

ಇದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಖುದ್ದಾಗಿ ಮಾಹಿತಿ ನೀಡಿದ್ದು, ಆಶಾ ಸಿಂಗ್​ ಅವರ ಎದುರು ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆಂದು ತಿಳಿದುಬಂದಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಸಂಪೂರ್ಣವಾದ ಬೆಂಬಲ ನೀಡಲು ಸಮಾಜವಾದಿ ಪಕ್ಷ ಮುಂದಾಗಿದೆ.

ಇದನ್ನೂ ಓದಿರಿ:'ಯೋಗಿ ಗೋರಖ್​ಪುರ್​​ದಲ್ಲೇ ಇರಬೇಕು' ಅಲ್ಲೇ ಇರಿ ಎಂದು ಸಿಎಂ ಆದಿತ್ಯನಾಥ್​ ಕಾಲೆಳೆದ ಅಖಿಲೇಶ್​

ಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯಕ್ಕೆ ನಾಂದಿ ಹಾಡುವ ಉದ್ದೇಶದಿಂದ ಕಾಂಗ್ರೆಸ್​ ಮೊದಲ ಪಟ್ಟಿಯಲ್ಲಿ 50 ಮಂದಿ ಮಹಿಳೆಯರಿಗೆ ಅವಕಾಶ ನೀಡಿದ್ದು, ಈ ಪಟ್ಟಿಯಲ್ಲಿ ಆಶಾ ಸಿಂಗ್​, ಸೋನಭದ್ರ ಹತ್ಯಾಕಾಂಡದ ಸಂತ್ರಸ್ತೆ ಹಾಗು ಆಶಾ ಕಾರ್ಯಕರ್ತೆ ಪೂನಂ ಪಾಂಡೆಗೂ ಅವಕಾಶ ನೀಡಲಾಗಿದೆ.

Last Updated : Jan 16, 2022, 3:12 PM IST

ABOUT THE AUTHOR

...view details