ಕರ್ನಾಟಕ

karnataka

ETV Bharat / bharat

ಸಮಾಜವಾದಿ ಪಕ್ಷದ ಮುಖಂಡ ಅಜಮ್ ಖಾನ್ ಸ್ಥಿತಿ ಗಂಭೀರ - ಸಮಾಜವಾದಿ ಪಕ್ಷದ ಮುಖಂಡ ಅಜಮ್ ಖಾನ್​ಗೆ ಕೊರೊನಾ

ಮೇ 9ರಂದು ಖಾನ್ ಅವರನ್ನು ಸೀತಾಪುರ ಜೈಲಿನಿಂದ ಲಖನೌದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ..

Azam Khan
Azam Khan

By

Published : May 29, 2021, 3:21 PM IST

ಲಖನೌ (ಉತ್ತರ ಪ್ರದೇಶ):ಸಮಾಜವಾದಿ ಪಕ್ಷದ ಮುಖಂಡ ಅಜಮ್ ಖಾನ್ ಅವರು ಕೃತಕ ಆಮ್ಲಜನಕದ ಬೆಂಬಲದಲ್ಲಿದ್ದಾರೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಲಖನೌದ ಮೇದಾಂತ ಆಸ್ಪತ್ರೆ ತಿಳಿಸಿದೆ.

"ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಅವರ ಸ್ಥಿತಿ ಗಂಭೀರವಾಗಿದೆ. ಅವರು ಆಕ್ಸಿಜನ್ ಸಪೋರ್ಟ್​ನಲ್ಲಿದ್ದಾರೆ" ಎಂದು ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 9ರಂದು ಖಾನ್ ಅವರನ್ನು ಸೀತಾಪುರ ಜೈಲಿನಿಂದ ಲಖನೌದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಮಗ ಅಬ್ದುಲ್ಲಾ ಖಾನ್ ಅವರನ್ನು ಕೂಡ ಕೊರೊನಾಗೆ ತುತ್ತಾಗಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಪ್ರಿಲ್ 30ರಂದು ತಂದೆ-ಮಗನಿಗೆ ಕೋವಿಡ್ ದೃಢಪಟ್ಟಿತ್ತು. ಅಜಮ್ ಖಾನ್ ವಿರುದ್ಧ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅವರು ಹಾಗೂ ಮಗ ಸೀತಾಪುರ ಜೈಲಿನಲ್ಲಿದ್ದರು.

ABOUT THE AUTHOR

...view details