ತಂಜಾವೂರು (ತಮಿಳುನಾಡು): ಕುಂಭಕೋಣಂನ ಮಲಯಪ್ಪನಲ್ಲೂರು ಗ್ರಾಮದ ರೈತ ಪಿ.ಜಿ.ಇಳಂಗೋವನ್ ಎಂಬುವರು ಕಳೆದ 30 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಭತ್ತದ ಮೇಲಿನ ಆಸಕ್ತಿಯಿಂದಾಗಿ ಸಾವಯವ ಕೃಷಿಯತ್ತ ಮುಖಮಾಡಿದ್ದಾರೆ. ಈ ಕಾರ್ಯವನ್ನು 10 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.
ಸಾವಯವ ಕೃಷಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ 110 ದಿನದ ಸಾಂಪ್ರದಾಯಿಕ ಭತ್ತದ ನೇಪಾಳ ಚಿನ್ನಾರ್ ತಳಿ ಹಾಗೂ ಮೈಸೂರು ಮಲ್ಲಿಗೆ ತಳಿಯನ್ನು ಕುರವೈ ಕೃಷಿಯಲ್ಲಿ ಬೆಳೆಸಿದ್ದು, ಅದರಲ್ಲಿ ತಿರುವಳ್ಳುವರ್ ಚಿತ್ರಣವನ್ನು ಕಾಣಬಹುದಾಗಿದೆ.
ಈ ಸಂಬಂಧ ಇಳಂಗೋವನ್ ಮಾತನಾಡಿ, ವಿಶ್ವವಿಖ್ಯಾತ ತಿರುಕ್ಕುರಳವನ್ನು ನೀಡಿದ ತಿರುವಳ್ಳುವರ್ ಎಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರು ನೈಸರ್ಗಿಕ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡುವ ಬಗ್ಗೆ ನಮಗೆ ತಿಳಿಸಿಕೊಟ್ಟಿದ್ದಾರೆ. ಅವರನ್ನು ಹೊಗಳಲು ಹಾಗೂ ಜಾಗೃತಿ ಮೂಡಿಸಲು ಈ ರೀತಿಯಲ್ಲಿ ನಾಟಿ ಮಾಡಿದ್ದೇನೆ. ನೈಸರ್ಗಿಕ ಕೃಷಿಯ ಬಗ್ಗೆ ಜನರು ಈ ಮೂಲಕ ಎಚ್ಚೆತ್ತುಕೊಳ್ಳಲಿ ಎಂಬುದು ನನ್ನ ಉದ್ದೇಶ ಎಂದಿದ್ದಾರೆ. ನಾಟಿ ಮಾಡಿ 60 ದಿನ ಕಳೆದಿರುವ ಈ ಬೆಳೆ ಈಗ ಬಾಡಲಾರಂಭಿಸಿದ್ದು, ಇನ್ನು 50 ದಿನಗಳಲ್ಲಿ ಫಸಲು ಬರಲಿದೆ.
ಇದನ್ನೂ ಓದಿ: ಕಲಬುರಗಿ ಜಿಲ್ಲೆಯಲ್ಲಿ ರೆಡ್ ಅಲರ್ಟ್.. ತುರ್ತು ಕಾರ್ಯಾಚರಣೆಗೆ ಸಜ್ಜಾದ ಎಸ್‌ಡಿಆರ್‌ಎಫ್