ಕರ್ನಾಟಕ

karnataka

ETV Bharat / bharat

ತಿರುಪತಿಯಲ್ಲಿ ದಕ್ಷಿಣ ವಲಯ ಮಂಡಳಿಯ ಸಭೆ: ಅಮಿತ್​ ಶಾ ನೇತೃತ್ವದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಭಾಗಿ - ಕೇಂದ್ರ ಗೃಹಮಂತ್ರಿ ಅಮಿತ್ ಶಾ

ದಕ್ಷಿಣ ವಲಯ ಮಂಡಳಿಯ ಸಭೆ (Meeting of Southern Zonal Council) ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆಯುತ್ತಿದ್ದು, ರಾಜ್ಯದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದಾರೆ.

southern-zonal-council-meeting-began
ತಿರುಪತಿಯಲ್ಲಿ ದಕ್ಷಿಣ ವಲಯ ಮಂಡಳಿಯ ಸಭೆ: ಸಿಎಂ ಬೊಮ್ಮಾಯಿ ಭಾಗಿ

By

Published : Nov 14, 2021, 4:22 PM IST

Updated : Nov 14, 2021, 5:31 PM IST

ತಿರುಪತಿ:ಆಂಧ್ರ ಪ್ರದೇಶದ ತಿರುಪತಿಯಲ್ಲಿ ಇಂದು ದಕ್ಷಿಣ ವಲಯ ಮಂಡಳಿಯ ಸಭೆ (Meeting of Southern Zonal Council) ನಡೆಯುತ್ತಿದ್ದು, ರಾಜ್ಯದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Sha) ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್​​ ರೆಡ್ಡಿ, ಲಕ್ಷ ದ್ವೀಪದ ಆಡಳಿತಗಾರ ಪ್ರಫುಲ್ ಪಟೇಲ್, ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಡಾ.ತಮಿಳ್ ಸಾಯಿ ಸೌಂದರ್​​ರಾಜನ್, ಪಾಂಡಿಚೇರಿಯ ಮುಖ್ಯಮಂತ್ರಿ ಎನ್.ರಂಗಸ್ವಾಮಿ, ಪಾಂಡಿಚೇರಿಯ ಲೆಫ್ಟಿನೆಂಟ್​​ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ ಉಪಸ್ಥಿತರಿದ್ದಾರೆ.

ತಿರುಪತಿಯಲ್ಲಿ ದಕ್ಷಿಣ ವಲಯ ಮಂಡಳಿಯ ಸಭೆ

ದಕ್ಷಿಣ ಭಾರತ ಸಚಿವರ ಸಭೆಯಲ್ಲಿ ಅಂತಾರಾಜ್ಯ ವಿಚಾರಗಳ ಕುರಿತು ಚರ್ಚೆ ಆಗುತ್ತಿದೆ. ದಕ್ಷಿಣ ಭಾರತ ಅಭಿವೃದ್ಧಿ ಬಗ್ಗೆ ಸಭೆ ನಡೆಯುತ್ತಿದೆ. ಕಳೆದ ವರ್ಷ ಈ ಸಭೆ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಹಾಗಾಗಿ ಈ ಬಾರಿಯ ಸಭೆ ಮಹತ್ವ ಪಡೆದುಕೊಂಡಿದೆ.

ಸಭೆಯಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಪೂರ್ವಭಾವಿಯಾಗಿ ಸಭೆ ನಡೆಸಿ, ಸಭೆಯಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು.

ಇದನ್ನೂ ಓದಿ:ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮೀಲಾದ್ರೂ ಬಿಡಲ್ಲ, ಬಲಿ ಹಾಕ್ತೀವಿ: ಸಿಎಂ ಬೊಮ್ಮಾಯಿ

Last Updated : Nov 14, 2021, 5:31 PM IST

ABOUT THE AUTHOR

...view details