ಆಯೋಧ್ಯೆಯಲ್ಲಿ ದಕ್ಷಿಣ ಶೈಲಿಯ ವೆಂಕಟೇಶ್ವರ ಸ್ವಾಮಿ ಮತ್ತು ತಾಯಿ ಮೀನಾಕ್ಷಿ ದೇವಾಲಯ ಅಯೋಧ್ಯೆ (ಉತ್ತರ ಪ್ರದೇಶ):ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಮಂದಿರ ಉದ್ಘಾಟನೆ ಇಡೀ ಅಯೋಧ್ಯೆ ಸಜ್ಜಾಗುತ್ತಿದೆ. ಪವಿತ್ರ ನಗರವಾದ ಅಯೋಧ್ಯೆಯನ್ನು ದೇವಾಲಯಗಳ ನಗರ ಎಂದೂ ಕರೆಯಲಾಗುತ್ತದೆ. ಈ ಪ್ರಾಚೀನ ನಗರದಲ್ಲಿ 5000ಕ್ಕೂ ಹೆಚ್ಚು ದೇವಾಲಯಗಳಿವೆ. ಇವುಗಳಲ್ಲಿ 100ಕ್ಕೂ ಹೆಚ್ಚು ಸ್ಕಂದ ಪುರಾಣ, ರಾಮಚರಿತಮಾನಸ, ವಾಲ್ಮೀಕಿ ರಾಮಾಯಣದಲ್ಲಿ ವಿವರಿಸಲಾಗಿರುವಂತಹ ದೇವಾಲಯಗಳು ಇಲ್ಲಿವೆ. ಇಲ್ಲಿರುವ ಪ್ರತಿಯೊಂದು ದೇವಾಲಯಗಳಿಗೆ ವಿಭಿನ್ನ ಇತಿಹಾಸ ಹಾಗೂ ನಂಬಿಕೆಗಳಿವೆ.
ಉತ್ತರ ಭಾರತದ ಈ ದೇವಾಲಯಗಳ ಪವಿತ್ರ ನಗರದಲ್ಲಿ ಉತ್ತರ ಭಾರತದ ಶೈಲಿ ಮಾತ್ರವಲ್ಲದೇ, ದಕ್ಷಿಣ ಭಾರತದ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳೂ ಇವೆ. ನೋಡಲು ಭವ್ಯವಾದ, ಆಕರ್ಷಕವಾದ ದೇವಾಲಯಗಳು ವಾಸ್ತುಶಿಲ್ಪದ ವಿಷಯದಲ್ಲಿ ಮಾತ್ರವಲ್ಲದೇ ಅವುಗಳ ಪೂಜಾ ವಿಧಾನಗಳಲ್ಲಿಯೂ ದಕ್ಷಿಣದ ಸಂಪ್ರದಾಯಗಳನ್ನು ಒಳಗೊಂಡಿವೆ. ಕ್ರಮೇಣ ಅಯೋಧ್ಯೆಯಲ್ಲಿ ದಕ್ಷಿಣ ಭಾರತೀಯ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳು ಹಾಗೂ ಆರಾಧನೆಗಳು ಬೇರೂರುತ್ತಿವೆ.
ಆಯೋಧ್ಯೆಯಲ್ಲಿ ದಕ್ಷಿಣ ಶೈಲಿಯ ವೆಂಕಟೇಶ್ವರ ಸ್ವಾಮಿ ಮತ್ತು ತಾಯಿ ಮೀನಾಕ್ಷಿ ದೇವಾಲಯ ವೆಂಕಟೇಶ್ವರ ಸ್ವಾಮಿ ಹಾಗೂ ತಾಯಿ ಮೀನಾಕ್ಷಿ ವಿಗ್ರಹಗಳ ಪೂಜೆ: ಅಯೋಧ್ಯೆಯಲ್ಲಿ ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಸುಮಾರು ಆರು ದೇವಾಲಯಗಳಿವೆ. ಅಮ್ಮಾಜಿ ದೇವಸ್ಥಾನ, ನ್ಯಾಟ್ ಕೋಟ್ ನಗರ ಸತ್ರಂ, ರಾಮಲಾಲಾ ಸದನಂ ಮುಂತಾದ ದಕ್ಷಿಣ ಭಾರತದ ಶೈಲಿಯ ದೇವಾಲಯಗಳು ಭಕ್ತರ ಗಮನ ಸೆಳೆಯುತ್ತಿವೆ. ಈ ದೇವಾಲಯಗಳ ನಿರ್ಮಾಣ ಶೈಲಿಯಿಂದ ಹಿಡಿದು, ದೇವತೆಗಳ ಆರಾಧನೆ ಹಾಗೂ ಆಚರಣೆಯಲ್ಲೂ ದಕ್ಷಿಣವನ್ನು ಹೋಲುತ್ತದೆ.
ಧಾರ್ಮಿಕ ನಗರವಾದ ಆಯೋಧ್ಯೆಯಲ್ಲಿ ಮುಖ್ಯವಾಗಿ ವೈಷ್ಣವ ಪಂಥಕ್ಕೆ ಸೇರಿದ ಹೆಚ್ಚಿನ ಸಂತರು ಹಾಗೂ ಋಷಿಗಳಿದ್ದಾರೆ. ರಾಮನಂದಿಯ ಪಥದ ಸಂಪ್ರದಾಯದ ಪ್ರಕಾರ, ರಾಮ, ಸೀತೆ ಹಾಗೂ ಹನುಮ ಸೇರಿದಂತೆ ಇತರ ದೇವರು ಮತ್ತು ದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ. ಆದರೆ ತಮ್ಮದೇ ಆದ ಗುರುತನ್ನು ಹೊಂದಿರುವ ದಕ್ಷಿಣ ಭಾರತದ ದೇವಾಲಯಗಳಲ್ಲಿ ವೆಂಕಟೇಶ್ವರ ಸ್ವಾಮಿ ಹಾಗೂ ತಾಯಿ ಮೀನಾಕ್ಷಿ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.
ಆಯೋಧ್ಯೆಯಲ್ಲಿ ದಕ್ಷಿಣ ಶೈಲಿಯ ವೆಂಕಟೇಶ್ವರ ಸ್ವಾಮಿ ಮತ್ತು ತಾಯಿ ಮೀನಾಕ್ಷಿ ದೇವಾಲಯ ದಕ್ಷಿಣ ಭಾರತದ ಸಂಪ್ರದಾಯದಲ್ಲಿ ದೇವರಿಗೆ ಪೊಂಗಲ್ ಪ್ರಸಾದ: ಶ್ರೀ ರಾಮಲಲ್ಲಾ ಸದನದ ಅರ್ಚಕ ಸುದರ್ಶನ ಮಹಾರಾಜ್ ಮಾತನಾಡಿ, ಅಯೋಧ್ಯೆಯಲ್ಲಿ ವೈಷ್ಣವ ಸಂಪ್ರದಾಯದ ದೇವಾಲಯಗಳಿದ್ದು, ರಾಮನಂದಿ ಸಂಪ್ರದಾಯದಂತೆ ಪೂಜೆ ನಡೆಯುತ್ತದೆ. ಆದರೆ ದಕ್ಷಿಣ ಭಾರತೀಯ ಸಂಪ್ರದಾಯಕ್ಕೆ ಸಂಬಂಧಿಸಿದ ದೇವಾಲಯಗಳಲ್ಲಿ, ಭಗವಂತನಿಗೆ ಆರತಿ ಮತ್ತು ಅವನ ಭೋಗ್ ರಾಗದಲ್ಲಿ ವೈವಿಧ್ಯತೆಯನ್ನು ಕಾಣಬಹುದು. ಇತರ ದೇವಾಲಯಗಳಲ್ಲಿ ಭಗವಂತನಿಗೆ ಸಾಮಾನ್ಯ ಆಹಾರಗಳಾದ ಖೀರ್, ಪೂರಿ, ದಾಲ್-ರೈಸ್, ಮಲ್ಪುವಾ ಮತ್ತು ಇತರ ಸಿಹಿತಿಂಡಿಗಳನ್ನು ಅರ್ಪಿಸಿದರೆ, ದಕ್ಷಿಣ ಭಾರತೀಯ ಸಂಪ್ರದಾಯದ ಪ್ರಕಾರ ನಿರ್ಮಿಸಲಾದ ದೇವಾಲಯಗಳಲ್ಲಿ, ಪೊಂಗಲ್ ಪ್ರಸಾದವನ್ನು ಭಗವಂತನಿಗೆ ಅರ್ಪಿಸಲಾಗುತ್ತದೆ. ಇದಲ್ಲದೇ, ಮೊಸರು ಮತ್ತು ಅನ್ನದಿಂದ ಮಾಡಿದ ಭಕ್ಷ್ಯಗಳನ್ನು ವಿಶೇಷವಾಗಿ ಭಗವಂತನಿಗೆ ಅರ್ಪಿಸಲಾಗುತ್ತದೆ.
ವೈಷ್ಣವ ಸಂಪ್ರದಾಯದ ಪ್ರಮುಖ ಸಂತ ಜಗದ್ಗುರು ರಮಾನಂದಾಚಾರ್ಯ ರಾಮದಿನೇಶಾಚಾರ್ಯ ಮಹಾರಾಜರು, ಭಕ್ತಿಯು ದಕ್ಷಿಣದಿಂದ ಹುಟ್ಟಿಕೊಂಡಿತು ಎಂದು ಹೇಳುತ್ತಾರೆ. ಇದನ್ನು ಧರ್ಮಗ್ರಂಥಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ. ಅಯೋಧ್ಯೆಯಲ್ಲಿ ದಕ್ಷಿಣ ಭಾರತದ ಸಂಪ್ರದಾಯದ ದೇವಾಲಯಗಳು ನಿರ್ಮಾಣವಾಗುತ್ತಿವೆ. ನಮ್ಮ ಪೂಜಾ ವಿಧಾನಕ್ಕೂ ಅವರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಕೆಲವು ಮೂಲ ಬದಲಾವಣೆಗಳು ಖಂಡಿತವಾಗಿಯೂ ನಡೆದಿವೆ. ದಕ್ಷಿಣವು ಭಕ್ತಿಯ ಸ್ಥಳ ಮತ್ತು ಉತ್ತರವು ಧ್ಯಾನ ಮತ್ತು ತಪಸ್ಸಿನ ಸ್ಥಳವಾಗಿದೆ. ಇವೆರಡೂ ಕೂಡಿದಾಗ ಮಾತ್ರ ಪರಮಪಿತ ಪರಮಾತ್ಮನ ಪ್ರಾಪ್ತಿಯಾಗುತ್ತದೆ. ಆದ್ದರಿಂದ, ಈ ಪ್ರಾಚೀನ ನಗರದಲ್ಲಿ ಈ ಎರಡು ಸಂಪ್ರದಾಯಗಳ ಸಮ್ಮಿಲನ ಸುಂದರವಾಗಿರುತ್ತದೆ. ಅಯೋಧ್ಯೆಗೆ ಬರುವ ರಾಮ ಭಕ್ತರಿಗೆ ರಾಮನಗರಿಯಲ್ಲಿ ಎರಡೂ ರೀತಿಯ ಸಂಸ್ಕೃತಿಗಳನ್ನು ನೋಡುವ ಭಾಗ್ಯವಿದೆ.
ಇದನ್ನೂ ಓದಿ :3 ವರ್ಷದಲ್ಲಿ ರಾಮಮಂದಿರ ನಿರ್ಮಾಣಕ್ಕೆ ₹900 ಕೋಟಿ ಖರ್ಚು: ಖಾತೆಯಲ್ಲಿ ₹3,000 ಕೋಟಿ ಬಾಕಿ