ಚೆನ್ನೈ/ತಮಿಳುನಾಡು:ಊರಿಗೆ ವಾಪಸ್ ತೆರಳಲು ಬಯಸುವ ವಲಸೆ ಕಾರ್ಮಿಕರಿಗೆ ವಿಶೇಷ ರೈಲುಗಳನ್ನು ಬಿಡಲು ಅಥವಾ ಇರುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಲು ನಿರ್ಧರಿಸುವುದಾಗಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ನಾವು ಶೀಘ್ರದಲ್ಲೇ ವಿಲ್ಲುಪುರಂನಿಂದ ಪುರುಲಿಯಾ ಮತ್ತು ಗೋರಖ್ಪುರಕ್ಕೆ ಎರಡು ವಿಶೇಷ ರೈಲುಗಳನ್ನು ಬಿಡಲಾಗುತ್ತದೆ. ಅದೇ ರೀತಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಳದ ಆಧಾರದ ಮೇಲೆ ಇರುವ ಟ್ರೈನ್ಗಳಿಹೆ ಹೆಚ್ಚುವರಿ ಬೋಗಿಗಳನ್ನು ಜೋಡಿಸುತ್ತೇವೆ" ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಗುಗಣೇಶನ್ ಹೇಳಿದ್ದಾರೆ. ಚೆನ್ನೈ ಮೂಲಕ ಚಲಿಸುವ ಅಲೆಪ್ಪಿ-ಧನ್ಬಾದ್ ಎಕ್ಸ್‌ಪ್ರೆಸ್‌ಗೆ ಇತ್ತೀಚೆಗೆ ಎರಡು ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ ಎಂದು ಅವರು ಹೇಳಿದರು. ಮೊದಲೇ ಟಿಕೆಟ್ ಕಾಯ್ದಿರಿಸಿದವರು ಈ ರೈಲುಗಳಲ್ಲಿ ತೆರಳಬಹುದು. ಇನ್ನು ಈಗಾಗಲೇ ಊರುಗಳಿಗೆ ವಾಪಸ್ ತೆರಳಲು ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಕೇಂದ್ರ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದಾರೆ.