ದಕ್ಷಿಣ ರೈಲ್ವೆ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಲೊಕೋ ಪೈಲಟ್, ಟೆಕ್ನಿಶಿಯನ್ ಪೋಸ್ಟ್, ಜ್ಯೂನಿಯರ್ ಇಂಜಿನಿಯರ್, ಟ್ರೈನಿ ಮ್ಯಾನೇಜರ್ ಸೇರಿದಂತೆ ಒಟ್ಟು 790 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ರಾಜ್ಯದಲ್ಲಿ ಈ ಹುದ್ದೆ ನೇಮಕಾತಿ ನಡೆಯಲಿದೆ. 10ನೇ ತರಗತಿ ಮತ್ತು ಐಟಿಐ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಹುದ್ದೆ ವಿವರ: ಅಸಿಸ್ಟೆಂಟ್ ಲೋಕೋ ಪೈಲಟ್ 234, ಟೆಕ್ನಿಶಿಯನ್ನಲ್ಲಿ , ಟ್ರೈನಿ ಮ್ಯಾನೇಜರ್ನಲ್ಲಿ 27, ಜ್ಯೂನಿಯರ್ ಇಂಜಿನಿಯರ್- 168, ಟೆಕ್ನಿಷಿಯನ್- 361 ಹುದ್ದೆಗಳು ಸೇರಿದಂತೆ ಒಟ್ಟು 709 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ವಿದ್ಯಾರ್ಹತೆ: ಅಸಿಸ್ಟೆಂಟ್ ಲೋಕೋ ಪೈಲಟ್ ಮತ್ತು ಟೆಕ್ನಿಶಿಯನ್ ಹುದ್ದೆಗೆ ಎಸ್ಎಸ್ಎಲ್ಸಿ ಮತ್ತು ಐಟಿಐ ಪದವಿ, ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ ಪದವಿ, ಟೆಕ್ನಿಶಿಯನ್ ಹುದ್ದೆಗೆ ಪದವಿಯನ್ನು ಹೊಂದಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 42 ವರ್ಷ ಆಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು www.rrcmas.inಈ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕು
ಅಭ್ಯರ್ಥಿಗಳು ಮೇಲಿನ ಲಿಂಕ್ನಲ್ಲಿ ಆನ್ಲೈನ್ ಅಪ್ಲಿಕೇಷನ್ನಲ್ಲಿ ವೈಯಕ್ತಿಕ ಮಾಹಿತಿ ಮತ್ತು ಬಯೋಡೇಟಾವನ್ನು ಎಚ್ಚರಿಕೆಯಿಂದ ಭರಿಸಬೇಕು