ರಾಮೋಜಿ ಫಿಲಂ ಸಿಟಿ(ಹೈದರಾಬಾದ್): ದಕ್ಷಿಣ ಕೊರಿಯಾದ ರಾಯಭಾರಿ ಚಾಂಗ್ ಜೇ ಬೊಕ್ ಇಂದು ರಾಮೋಜಿ ಫಿಲಂ ಸಿಟಿಗೆ ಭೇಟಿ ನೀಡಿದರು. ಈ ವೇಳೆ ಇಲ್ಲಿನ ಚಲನಚಿತ್ರ ನಿರ್ಮಾಣದ ಬಗೆಗಿನ ಮಾಹಿತಿ ಪಡೆದುಕೊಂಡಿದ್ದಾರೆ.
ಚಾಂಗ್ ಜೇ ಬೊಕ್ ನೇತೃತ್ವದ ದಕ್ಷಿಣ ಕೊರಿಯಾದ ನಿಯೋಗ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡಿದ್ದು, ಚಿತ್ರೀಕರಣಕ್ಕೆ ಸಿದ್ಧವಾಗಿರುವ ಸೆಟ್ಗಳು, ಸ್ಥಳಗಳು ಮತ್ತು ಸ್ಟುಡಿಯೋಗಳು ಸೇರಿದಂತೆ ಹಲವಾರು ಚಲನಚಿತ್ರ ನಿರ್ಮಾಣ ಸೌಲಭ್ಯಗಳ ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:ಪ್ರವಾಸೋದ್ಯಮಕ್ಕೆ ಉತ್ತೇಜನ: ರಾಮೋಜಿ ಫಿಲಂ ಸಿಟಿ ಜೊತೆ ಭಾರತೀಯ ರೈಲ್ವೆ ಮಹತ್ವದ ಒಪ್ಪಂದ
ರಾಮೋಜಿ ಫಿಲಂ ಸಿಟಿಯಲ್ಲಿ ಲಭ್ಯವಾಗುವ ವಿವಿಧ ಸೇವೆಗಳು ಮತ್ತು ಉತ್ಪಾದನಾ ಸೌಲಭ್ಯಗಳು, ಸಮರ್ಪಿತ ವಿಭಾಗಗಳು ಮತ್ತು ಚಿತ್ರೀಕರಣಕ್ಕಾಗಿ ಸಿದ್ಧವಾಗಿರುವ ಸೆಟ್ ನೋಡಿ ಪ್ರಭಾವಿತರಾಗಿದ್ದಾರೆ. ಇದಾದ ಬಳಿಕ ರಾಮೋಜಿ ಗ್ರೂಪ್ನ ಚೇರ್ಮನ್ ರಾಮೋಜಿ ರಾವ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಫಿಲಂ ಸಿಟಿ ಎಂಡಿ ವಿಜಯೇಶ್ವರಿ, ರಾಮೋಜಿ ಫಿಲಂ ಸಿಟಿಯ ವ್ಯವಸ್ಥಾಪಕ ನಿರ್ದೇಶಕಿ ಸೋಹನಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗಿನ್ನೆಸ್ ವಿಶ್ವ ದಾಖಲೆಯಿಂದ ಪ್ರಮಾಣೀಕರಿಸಲ್ಪಟ್ಟಿರುವ ರಾಮೋಜಿ ಫಿಲಂ ಸಿಟಿ ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ ಎಂದು ಗುರುತಿಸಿಕೊಂಡಿದೆ.