ಕರ್ನಾಟಕ

karnataka

ETV Bharat / bharat

ಪುಲ್ವಾಮಾ.. ಇದು ಪ್ರತಿದಿನ 8.5 ಲಕ್ಷ ಲೀಟರ್ ಹಾಲು ಉತ್ಪಾದಿಸುವ ‘ಕಾಶ್ಮೀರದ ಆನಂದ್’ - South Kashmir Pulwama

ಪುಲ್ವಾಮಾದಲ್ಲಿ ಪ್ರತಿದಿನ 8.5 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತದೆ. ಇದನ್ನು ದಕ್ಷಿಣದ ಬನಿಹಾಲ್​ನಿಂದ ಕಣಿವೆಯ ಉತ್ತರಕ್ಕೆ ವಿವಿಧ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ.

South Kashmir Pulwama district is called Anand of Kashmir
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ದೊಡ್ಡ ಪ್ರಮಾಣದ ಹಾಲು ಉತ್ಪಾದನೆ

By

Published : Jan 16, 2021, 6:03 AM IST

Updated : Jan 16, 2021, 6:18 AM IST

ದಕ್ಷಿಣ ಕಾಶ್ಮೀರ: ಪುಲ್ವಾಮಾ ಜಿಲ್ಲೆಯನ್ನು ದೊಡ್ಡ ಪ್ರಮಾಣದ ಹಾಲು ಉತ್ಪಾದನೆಗಾಗಿ ‘ಕಾಶ್ಮೀರದ ಆನಂದ್’ ಎಂದು ಕರೆಯಲಾಗುತ್ತದೆ. ಆದರೆ ಹಾಲು ಉತ್ಪಾದನೆ ಮತ್ತು ‘ಆನಂದ್’ ಪದದ ನಡುವಿನ ಸಂಬಂಧವೇನು? ಇಲ್ಲಿದೆ ಆ ಪ್ರಶ್ನೆಗೆ ಉತ್ತರ

ಗುಜರಾತ್‌ನಲ್ಲಿ ಆನಂದ್ ಎಂಬ ಜಿಲ್ಲೆ ಇದೆ. ದೊಡ್ಡ ಪ್ರಮಾಣದ ಹಾಲು ಉತ್ಪಾದನೆಗಾಗಿ ಈ ಜಿಲ್ಲೆಯನ್ನು ಗುಜರಾತ್‌ನ ‘ಹಾಲಿನ ನಗರ’ ಎಂದು ಕರೆಯಲಾಗುತ್ತದೆ. ಈ ಸ್ಥಳವನ್ನು ಏಷ್ಯಾದ ಅತಿದೊಡ್ಡ ಹಾಲು ಉತ್ಪಾದಕ ಕೇಂದ್ರ ಎಂದು ಪರಿಗಣಿಸಲಾಗಿದೆ. ಅಂತೆಯೇ ಪುಲ್ವಾಮಾದಲ್ಲಿ ಪ್ರತಿದಿನ 8.5 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತದೆ. ಇದನ್ನು ದಕ್ಷಿಣದ ಬನಿಹಾಲ್​ನಿಂದ ಕಣಿವೆಯ ಉತ್ತರಕ್ಕೆ ವಿವಿಧ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ.

ಇದು ಕಾಶ್ಮೀರದ ‘ಆನಂದ’

ಆಧುನಿಕ ತಾಂತ್ರಿಕ ಉಪಕರಣಗಳೊಂದಿಗೆ ಹಾಲಿನ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ. ಹಾಲು ಘಟಕ ಹೊಂದಿರುವವರಿಗೆ ಹಾಲಿನ ಉತ್ಪಾದನೆಯ ಗುಣಮಟ್ಟಕ್ಕೆ ಅನುಗುಣವಾಗಿ ಹಣ ಪಾವತಿಸಲಾಗುತ್ತದೆ. 25 ರೂಪಾಯಿಗೆ ಮಾರಾಟವಾಗುವ ಹಾಲು ಲೀಟರ್‌ಗೆ 35 ರಿಂದ 40 ರೂಪಾಯಿಗಳವರೆಗೆ ಹೋಗಬಹುದು.

ಪುಲ್ವಾಮಾದಲ್ಲಿ 1.16 ಲಕ್ಷ ಜಾನುವಾರುಗಳು ಇದ್ದವು. ಆದರೆ, ಈ ಸಂಖ್ಯೆ ಪ್ರಸ್ತುತ 98 ಸಾವಿರಕ್ಕೆ ಇಳಿದಿದೆ.

ಪುಲ್ವಾಮಾ ವಾರ್ಷಿಕವಾಗಿ ಮುನ್ನೂರು ಕೋಟಿ ಲೀಟರ್ ಹಾಲು ಉತ್ಪಾದಿಸುತ್ತದೆ. ಪುಲ್ವಾಮಾದಲ್ಲಿ ಹೈನುಗಾರಿಕೆ ಉತ್ತೇಜಿಸಲು ಪಶುಸಂಗೋಪನಾ ಇಲಾಖೆ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದು, ಇದರಿಂದ ಯುವ ಜನರಿಗೆ ಉದ್ಯೋಗ ದೊರೆತಿದೆ.

ಜಿಲ್ಲೆಯು ಸರಿಸುಮಾರು 15 ಹಾಲು ಸಂಗ್ರಹ ಘಟಕಗಳನ್ನು ಹೊಂದಿದ್ದು, ಅಲ್ಲಿಂದ ಹಾಲು ಸಂಗ್ರಹಿಸಿ ನಂತರ ಕಣಿವೆಯಾದ್ಯಂತ ವಿವಿಧ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ. ಈ ಡೈರಿ ಪ್ಲಾಂಟ್‌ಗಳು ಸಾವಿರಾರು ಯುವಕರಿಗೆ ಉದ್ಯೋಗವನ್ನು ಒದಗಿಸುತ್ತಿವೆ.

Last Updated : Jan 16, 2021, 6:18 AM IST

For All Latest Updates

ABOUT THE AUTHOR

...view details