ತಿರುವನಂತಪುರಂ(ಕೇರಳ):ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಸುಮಾರು 200 ಹಾಡುಗಳನ್ನು ಹಾಡಿರುವ ಹಿನ್ನೆಲೆ ಗಾಯಕಿ ಸಂಗೀತಾ ಸಚಿತ್ (46) ಅವರು ಭಾನುವಾರ ತಮ್ಮ ಸಹೋದರಿಯ ಮನೆಯಲ್ಲಿ ನಿಧನರಾದರು. ಇವರು ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ಸಂಗೀತಾ ಅವರು ತಮಿಳಿನ ‘ನಾಲೈ ತೀರ್ಪು’ ಚಿತ್ರದಲ್ಲಿ ಹಾಡುವ ಮೂಲಕ ಸಂಗೀತ ಲೋಕಕ್ಕೆ ಪಾದಾರ್ಪಣೆ ಮಾಡಿದರು ಎ.ಆರ್.ರೆಹಮಾನ್ ಸಂಯೋಜಿಸಿದ ತಮಿಳು ಚಲನಚಿತ್ರ ಮಿಸ್ಟರ್ ರೋಮಿಯೋದಲ್ಲಿ ಅವರ ಹಾಡಿದ 'ತಣ್ಣೀರೈ ಕತಲಿಕ್ಕುಮ್' ಹಾಡು ಹಿಟ್ ಆಗಿತ್ತು. ಮಲಯಾಳಂ ಚಿತ್ರದ ಕಕ್ಕುಯಿಲ್‌ನ ‘ಅಲಾರೆ ಗೋವಿಂದಾ’, ಎನ್ನ್ ಸ್ವಂತಂ ಜಾನಕಿಕುಟ್ಟಿಯ ‘ಅಂಬಿಲಿಪೂವಟ್ಟಂ’ ಮತ್ತು ‘ಧುಮ್ ಧುಮ್ ಧುಮ್ ಧುರಯಾತೋ’ ಅವರು ಹಾಡಿರುವ ಜನಪ್ರಿಯ ಹಾಡುಗಳು.