ಕರ್ನಾಟಕ

karnataka

ETV Bharat / bharat

ಡಾ. ದೇವಿ ಶೆಟ್ಟಿ ಸಮ್ಮುಖದಲ್ಲಿ ಸೌರವ್ ಗಂಗೂಲಿಗೆ ನಾಳೆ ಸ್ಟಂಟ್ ಅಳವಡಿಕೆ - ಗಂಗೂಲಿ ಇತ್ತೀಚಿನ ಸುದ್ದಿ

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ತಮ್ಮ ಹೃದಯದ ಪರಿಸ್ಥಿತಿಯನ್ನು ಪರಿಶೀಲಿಸಲು ಬುಧವಾರ ಆಸ್ಪತ್ರೆಗೆ ಬಂದಿದ್ದು, ಅವರ ಪ್ರಮುಖ ಪ್ಯಾರಾಮೀಟರ್ಸ್​ ಸ್ಥಿರವಾಗಿವೆ ಎಂದು ಅಪೋಲೋ ಗ್ಲೆನೆಗಲ್ಸ್​ ಆಸ್ಪತ್ರೆ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಿದೆ.

Sourav Ganguly
Sourav Ganguly

By

Published : Jan 27, 2021, 9:46 PM IST

ಕೋಲ್ಕತ್ತಾ:ಎದೆನೋವಿನ ಕಾರಣ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ನಾಳೆ ಸ್ಟಂಟ್​ ಅಳವಡಿಕೆ ಮಾಡಲಾಗುವುದು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೋಲ್ಕತ್ತಾದ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ನಾಳೆ ಡಾ. ದೇವಿ ಶೆಟ್ಟಿ ಸಮ್ಮುಖದಲ್ಲಿ ಸ್ಟಂಟ್ ಅಳವಡಿಕೆ ಮಾಡಲಾಗುವುದು ಎಂದು ವುಡ್​ಲ್ಯಾಂಡ್​ ಆಸ್ಪತ್ರೆ ಮಾಹಿತಿ ನೀಡಿದೆ.

ಓದಿ: ಚಿಂತೆ ಪಡಬೇಕಾಗಿಲ್ಲ, ಗಂಗೂಲಿ ತಪಾಸಣೆಗಷ್ಟೇ ಬಂದಿದ್ದಾರೆ : ಆಸ್ಪತ್ರೆ ಮಾಹಿತಿ

ಕಳೆದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಆಂಜಿಯೊಪ್ಲಾಸ್ಟಿ ಮಾಡಲಾಗಿದ್ದು, ಇದಾದ ಬಳಿಕ ಅವರಿಗೆ ಮತ್ತೆ ಇಂದು ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಡಾ. ಸಪ್ತರ್ಶಿ ಬಸು, ಡಾ. ಸರೋಜ್​ ಮೊಂಡಾಲ್​ ಹಾಗೂ ಡಾ. ಅಫ್ತಾಬ್​ ಖಾನ್ ನೇತೃತ್ವದ ತಂಡ ಡಾ. ದೇವಿ ಶೆಟ್ಟಿ ಸಮ್ಮುಖದಲ್ಲಿ ಸ್ಟಂಟ್ ಅಳವಡಿಕೆ ಮಾಡಲಿದ್ದಾರೆ ಎಂದು ವುಡ್​ಲ್ಯಾಂಡ್​ ಆಸ್ಪತ್ರೆ ತಿಳಿಸಿದೆ. ಜನವರಿ 6ರಂದು ವುಡ್​ಲ್ಯಾಂಡ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದ ಗಂಗೂಲಿ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು.

ತಮ್ಮ ನಿವಾಸದ ಜಿಮ್​​ನಲ್ಲಿ ವರ್ಕೌಟ್ ಮಾಡುವಾಗ ಗಂಗೂಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಸೌರವ್ ಗಂಗೂಲಿಯವರ ಹೃದಯದ ಅಭಿದಮನಿಯಲ್ಲಿ ಬ್ಲಾಕೇಜ್ ಇರುವ ಬಗ್ಗೆ ಗೊತ್ತಾಗಿತ್ತು.

ABOUT THE AUTHOR

...view details