ಕರ್ನಾಟಕ

karnataka

ETV Bharat / bharat

ಪೂರ್ವಜರ ಮನೆ ತೊರೆದು ₹40 ಕೋಟಿ ವೆಚ್ಚದ ಬಂಗಲೆಗೆ ಶೀಘ್ರವೇ 'ದಾದಾ' ಶಿಫ್ಟ್​..

ಈಗಿರುವ 'ತಬೇಬೆಹಲಾ' ಮನೆಯಿಂದ ಪ್ರಯಾಣಿಸಲು ಗಂಗೂಲಿ ಕಷ್ಟಪಡುತ್ತಿದ್ದರು. ಜೊತೆಗೆ ಇಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ನಗರದಿಂದ ಬಳಹ ದೂರ ಸಾಗಬೇಕಿತ್ತು. ಹೀಗಾಗಿ,ಕೋಲ್ಕತ್ತಾ ನಗರದ ಮಧ್ಯೆ ಹೊಸ ಮನೆ ಖರೀಸಿದ್ದಾರೆ..

Sourav Ganguly moving to a new Bungalow
ಹೊಸ ಮನೆ ಖರೀದಿಸಿದ ಸೌರವ್ ಗಂಗೂಲಿ

By

Published : May 21, 2022, 3:25 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ) :ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೊಸ ಮನೆಗೆ ಹೋಗುತ್ತಿದ್ದಾರೆ. 47 ವರ್ಷಗಳ ಕಾಲ ನೆಲೆಸಿದ್ದ ಮತ್ತು ತಮ್ಮ ಪೂರ್ವಜರ ಮನೆಯ ತೊರೆದು ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿರುವ ಎರಡು ಅಂತಸ್ತಿನ ನಿವಾಸಕ್ಕೆ ಗಂಗೂಲಿ ಶಿಫ್ಟ್​ ಆಗುತ್ತಿದ್ದಾರೆ.

47 ವರ್ಷಗಳ ಸೆಂಟ್ರಲ್​​ ಕೋಲ್ಕತ್ತಾದ ಬಿರೇನ್ ರಾಯ್ ರಸ್ತೆಯ ಮನೆಯಲ್ಲಿ ಗಂಗೂಲಿ ಕುಟುಂಬ ವಾಸವಿತ್ತು. ಆದರೆ, ಆರೋಗ್ಯ ಮತ್ತು ಪ್ರಯಾಣದ ದೃಷ್ಟಿಯಿಂದ ಈಗ ಲೋವರ್ ರಾವ್ಡನ್ ಸ್ಟ್ರೀಟ್​ನಲ್ಲಿ ಖರೀದಿಸಿರುವ ಮನೆಗೆ ತಮ್ಮ ವಾಸ ಬದಲಾಯಿಸಲು ನಿರ್ಧರಿಸಿದ್ದಾರೆ.

ತಮ್ಮ ಪೂರ್ವಜರ ಮನೆಯ ತೊರೆಯುವುದು ನಿರ್ಧಾರ ಕಷ್ಟವಾಗಿದೆ ಎಂದು ಹೇಳಿರುವ ಗಂಗೂಲಿ, 'ತಬೇಬೆಹಲಾ'ದಿಂದ ಪ್ರಯಾಣಿಸಲು ತೀವ್ರ ತೊಂದರೆ ಉಂಟಾಗುತ್ತಿತ್ತು. ನಾನೂ ಸಾಕಷ್ಟು ಬಾರಿ ಇಲ್ಲಿಂದಲೇ ಪ್ರಯಾಣಿಸಲು ಪ್ರಯತ್ನಿಸಿದ್ದೇನೆ. ಆದರೆ, ನನಗೆ ಸಾಧ್ಯವಾಗಲಿಲ್ಲ. ಹೀಗಾಗಿ, ನಗರದ ಮಧ್ಯದಲ್ಲಿ ಮನೆ ಹೊಂದಿರುವುದು ಕೆಲಸಕ್ಕೂ ಅನುಕೂಲವಾಗಲಿದೆ ಎಂದು ಹೇಳಿಕೊಂಡಿದ್ದಾರೆ.

ಅನುಪಮಾ ಬಗ್ರಿ, ಕೇಶಬ್ ದಾಸ್ ಬೇಯಾನಿ ಮತ್ತು ನಿಕುಂಜ್ ಬೇಯಾನಿ ಅವರ ಹೆಸರಿನಲ್ಲಿದ್ದ ಹೊಸ ಮನೆಯನ್ನು ಗಂಗೂಲಿ ಖರೀದಿಸಿದ್ದಾರೆ. ಇದನ್ನು ತಮ್ಮ ತಾಯಿ ನಿರುಪಾ ಗಂಗೋಪಾಧ್ಯಾಯ, ಪತ್ನಿ ಡೊನ್ನಾ ಮತ್ತು ಪುತ್ರಿ ಸನಾ ಅವರ ಹೆಸರಿನಲ್ಲಿ ಜಂಟಿಯಾಗಿ ನೋಂದಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮುಂಬೈ.. ಮುಂಬೈ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಬಳಗಕ್ಕೆ ಕೊಹ್ಲಿ, ಡುಪ್ಲೆಸಿಸ್​​ ಬೆಂಬಲ

ABOUT THE AUTHOR

...view details