ಚೆನ್ನೈ:ತಮಿಳಿನ ಖ್ಯಾತ ನಟ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕಿರಿಯ ಮಗಳು ಸೌಂದರ್ಯ ರಜನಿಕಾಂತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನ್ಮ ನೀಡಿರುವ ಅವರು ಮಗುವಿನ ಕೈ ಫೋಟೋ ಶೇರ್ ಮಾಡಿದ್ದು, ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ಸೌಂದರ್ಯ ರಜನಿಕಾಂತ್ - ಈಟಿವಿ ಭಾರತ ಕನ್ನಡ
ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕಿರಿಯ ಮಗಳು ಸೌಂದರ್ಯ ರಜನಿಕಾಂತ್ ಇಂದು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ಸೌಂದರ್ಯ ರಜನಿಕಾಂತ್
"ದೇವರ ಅನುಗ್ರಹ ಮತ್ತು ನಮ್ಮ ಹೆತ್ತವರ ಆಶೀರ್ವಾದದಿಂದ ವಿಶಾಗನ್, ವೇದ್ ಮತ್ತು ನಾನು ಇಂದು ವೇದ್ ಅವರ ಚಿಕ್ಕ ಸಹೋದರ ವೀರ್ ರಜನಿಕಾಂತ್ಗೆ ಸ್ವಾಗತ ಕೋರಿದ್ದೇವೆ. ಇನ್ನು ಈ ಸಂದರ್ಭದಲ್ಲಿ ವೈದ್ಯಾರಾದ ಸುಮನಾ ಮನೋಹರ್ ಮತ್ತು ಡಾ.ಶ್ರೀವಿದ್ಯಾ ಶೇಷಾದ್ರಿ ಅವರಿಗೆ ಧನ್ಯವಾದಗಳು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಟ ನಟಿಯರು ಸೇರಿದಂತೆ ಸೆಲೆಬ್ರಿಟಿಗಳು, ಸ್ನೇಹಿತರು, ಅಭಿಮಾನಿಗಳು ದಂಪತಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ:ಸಮಸ್ಯೆ ಎಡೆಗಿನ ನಮ್ಮ ಮನೋಭಾವವೇ ನಿಜವಾದ ಪ್ರಾಬ್ಲಂ : ನಟಿ ಶಿಲ್ಪಾ ಶೆಟ್ಟಿ