ಮೊಗಾ (ಪಂಜಾಬ್): 2022ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ (Punjab Assembly polls -2022) ತನ್ನ ಸಹೋದರಿ ಮಾಳವಿಕಾ (Malvika) ಸ್ಪರ್ಧಿಸುವುದಾಗಿ ನಟ ಸೋನು ಸೂದ್ (Sonu Sood) ತಿಳಿಸಿದ್ದಾರೆ. ಆದರೆ ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ಪಂಜಾಬ್ನ ಮೊಗಾ ಜಿಲ್ಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸೋನು ಸೂದ್, ತನ್ನ ಸಹೋದರಿ ಮಾಳವಿಕಾ ಪಂಜಾಬ್ ಜನರ ಸೇವೆ ಸಲ್ಲಿಸುತ್ತಾರೆ. ಪಂಜಾಬ್ ಜನತೆಯ ವಿಶ್ವಾಸ ಗಳಿಸಲು ಶಕ್ತಿಮೀರಿ ಪ್ರಯತ್ನಿಸಲಾಗುವುದು. ಚುನಾವಣೆ ವೇಳೆ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು. ಸೂಕ್ತ ಸಮಯದಲ್ಲಿ ಪಕ್ಷದ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.