ಕರ್ನಾಟಕ

karnataka

ETV Bharat / bharat

ಉದ್ಯೋಗ ವಂಚಿತರಿಗೆ ಇ-ರಿಕ್ಷಾ ವಿತರಿಸಿದ ಸೋನು ಸೂದ್​!! - ನಟ ಸೋನು ಸೂದ್ ಇ ರಿಕ್ಷಾ ವಿತರಣೆ

'ದಬಾಂಗ್' 'ಜೋಧಾ ಅಕ್ಬರ್' ಮತ್ತು 'ಸಿಂಬಾ' ಚಿತ್ರಗಳ ಮೂಲಕ ಹೆಸರಾಗಿರುವ ಸೋನು ಸೂದ್, ಈ ವರ್ಷದ ಆರಂಭದಲ್ಲಿ ಕೊರೋನಾವೈರಸ್ ಕಾಣಿಸಿಕೊಂಡ ನಂತರ ಲಾಕ್​ಡೌನ್​ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ತಲುಪಲು ಪರಿತಪಿಸುತ್ತಿದ್ದ ವಲಸೆ ಜನರು ತಮ್ಮೂರಿಗೆ ಮರಳಲು ತಮ್ಮ ಸ್ವಂತ ಹಣದಲ್ಲಿ ಬಸ್ ಗಳ ವ್ಯವಸ್ಥೆ ಮಾಡಿದ್ದರು.ಇದೀಗ ಉದ್ಯೋಗ ವಂಚಿತರಿಗೆ ಸುಮಾರು 100 ಇ -ರಿಕ್ಷಾಗಳನ್ನು ವಿತರಿಸಿದ್ದಾರೆ..

sonu-sood-to-distribute-e-rickshaws-starts-with-his-hometown-moga
ಉದ್ಯೋಗ ವಂಚಿತರಿಗೆ ಇ-ರಿಕ್ಷಾ ವಿತರಿಸಿದ ಸೋನು ಸೂದ್​!

By

Published : Feb 14, 2021, 11:03 PM IST

ಮುಂಬೈ : ದೇಶದ ವಿವಿಧ ಭಾಗಗಳಲ್ಲಿ ಅಗತ್ಯವಿರುವವರಿಗೆ ಎಲೆಕ್ಟ್ರಾನಿಕ್ ರಿಕ್ಷಾ ವಿತರಿಸಲು ನಟ ಸೋನು ಸೂದ್ ನಿರ್ಧರಿಸಿದ್ದಾರೆ.

ಇವರು ತಮ್ಮ ಹುಟ್ಟೂರಾದ ಮೊಗದಲ್ಲಿ ಸುಮಾರು 100 ರಿಕ್ಷಾಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ನಿರುದ್ಯೋಗಿಗಳಿಗೆ, ವಿಶೇಷವಾಗಿ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ನಟ ಸೋನು ಈ ಯೋಜನೆ ಕೈಗೊಂಡಿದ್ದಾರೆ.

ಉತ್ತರಪ್ರದೇಶದಿಂದ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಇನ್ನಿತರ ರಾಜ್ಯಗಳಿಗೆ ರಿಕ್ಷಾಗಳನ್ನು ವಿತರಿಸಲು ನಾನು ಬಯಸುತ್ತೇನೆ. ಸದ್ಯಕ್ಕೆ, ನಾನು ನನ್ನ ಸ್ವಂತ ಊರಾದ ಮೊಗಾ, ಪಂಜಾಬ್‌ನಲ್ಲಿ ಪ್ರಾರಂಭಿಸಿದ್ದೇನೆ ಎಂದು ನಟ ಸೋನು ಈ ಬಗ್ಗೆ ತಿಳಿಸಿದ್ದಾರೆ.

ಜನರು ಸ್ವಾವಲಂಬಿಗಳಾಗಬೇಕೆಂದು ನಾನು ಬಯಸುತ್ತೇನೆ, ಇದರಿಂದ ಅವರು ಉದ್ಯೋಗ ಪಡೆಯುತ್ತಾರೆ ಮತ್ತು ತಮ್ಮ ಜೀವನದಲ್ಲಿ ದುಡಿದು ಸಂಪಾದಿಸುತ್ತಾರೆ. ಸಾಂಕ್ರಾಮಿಕ ರೋಗದ ನಂತರ ಅನೇಕ ಜನರು ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟವಾಗಿರುವುದರಿಂದ ಇ-ರಿಕ್ಷಾಗಳು ಅವರಿಗೆ ಸಹಾಯ ಮಾಡಲು ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ.

ಪ್ರತಿಯೊಬ್ಬರೂ ತಮ್ಮ ಹಣವನ್ನು ಅನಗತ್ಯವಾಗಿ ಖರ್ಚು ಮಾಡಬಾರದು, ಬದಲಿಗೆ ಅಗತ್ಯವಿರುವವರಿಗೆ ಇ-ರಿಕ್ಷಾ ನೀಡಿ ಇದರಿಂದ ಅವರು ತಮ್ಮ ಕುಟುಂಬಗಳಿಗೆ ಸಹಾಯ ಮಾಡುತ್ತಾರೆ ಎಂದು ವಿನಂತಿಸಿಕೊಂಡಿದ್ದಾರೆ.

ABOUT THE AUTHOR

...view details