ಕರ್ನಾಟಕ

karnataka

ETV Bharat / bharat

ಕೊರೊನಾ ಗೆದ್ದ ಸೋನು ಸೂದ್​: ಕೋವಿಡ್​ ಸೋಂಕಿತೆಯನ್ನು ನಾಗ್ಪುರ​ದಿಂದ ಹೈದರಾಬಾದ್​ಗೆ ಏರ್​ಲಿಫ್ಟ್ ಮಾಡಿಸಿದ ನಟ​! - ಮಹಾಮಾರಿ ಕೊರೊನಾ ವೈರಸ್​

ಡೆಡ್ಲಿ ವೈರಸ್​ ಕೊರೊನಾ ಸೋಂಕಿಗೊಳಗಾಗಿದ್ದ ನಟ ಸೋನು ಸೂದ್​ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಇದರ ಮಧ್ಯೆ ತಮ್ಮ ಸಹಾಯಹಸ್ತ ಮುಂದುವರಿಸಿದ್ದಾರೆ.

Sonu Sood Tests Negative For COVID-19
Sonu Sood Tests Negative For COVID-19

By

Published : Apr 23, 2021, 5:37 PM IST

Updated : Apr 23, 2021, 5:44 PM IST

ನವದೆಹಲಿ:ಮಹಾಮಾರಿ ಕೊರೊನಾ ವೈರಸ್​ ವಿರುದ್ಧ ಲಕ್ಷಾಂತರ ಜನರು ಹೋರಾಟ ನಡೆಸಿದ್ದು, ಈ ಸಂದರ್ಭದಲ್ಲಿ ಬಹುಭಾಷಾ ನಟ ಸೋನು ಸೂದ್​​ ಸಾವಿರಾರು ಜನರ ಪಾಲಿಗೆ ರಿಯಲ್​ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷದಿಂದಲೂ ಸಾವಿರಾರು ಕುಟುಂಬಗಳಿಗೆ ಸಹಾಯ ಮಾಡಿ ಮೆಚ್ಚುಗೆಗೆ ಪಾತ್ರರಾಗಿರುವ ಸೋನು ಸೂದ್​, ಈಗಲೂ ತಮ್ಮ ಸೇವಾ ಕಾರ್ಯ ಮುಂದುವರೆಸಿದ್ದಾರೆ. ಕೋವಿಡ್​ನಿಂದ ಗಂಭೀರವಾಗಿದ್ದ ಯುವತಿಯೊಬ್ಬಳನ್ನು ವಿಶೇಷ ಚಿಕಿತ್ಸೆಗೋಸ್ಕರ ಏರ್​ಲಿಫ್ಟ್​ ಮೂಲಕ ನಾಗ್ಪುರ​ದಿಂದ ಹೈದರಾಬಾದ್​ಗೆ ರವಾನೆ ಮಾಡಿದ್ದಾರೆ.

25 ವರ್ಷದ ಯುವತಿ ಭಾರ್ತಿ ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿರುವ ಕಾರಣ ಶೇ.85-90ರಷ್ಟು ಶ್ವಾಸಕೋಶದ ತೊಂದರೆ ಅನುಭವಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಗೋಸ್ಕರ ನಾಗ್ಪುರ​ದಿಂದ ಹೈದರಾಬಾದ್​ನ ಅಪೊಲೋ ಆಸ್ಪತ್ರೆಗೆ ಏರ್​ಲಿಫ್ಟ್​ ಮಾಡಿಸಿದ್ದಾರೆ. ಜತೆಗೆ ಅಪೊಲೋ ಆಸ್ಪತ್ರೆ ವೈದ್ಯರೊಂದಿಗೆ ಮಾತುಕತೆ ನಡೆಸಿ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.

ಕೋವಿಡ್​​ ಗೆದ್ದ ಸೋನು ಸೂದ್​: ಕಳೆದ ಕೆಲ ದಿನಗಳ ಹಿಂದೆ ಮಹಾಮಾರಿ ಕೊರೊನಾ ವೈರಸ್​ ಸೋಂಕಿಗೊಳಗಾಗಿದ್ದ ನಟ ಸೋನು ಸೋದ್​ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಅವರ ಕೋವಿಡ್​ ವರದಿ ನೆಗೆಟಿವ್​ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿರುವ ನಟ, ಕೋವಿಡ್​ ವರದಿ ನೆಗೆಟಿವ್​ ಬಂದಿದೆ ಎಂದಿದ್ದಾರೆ.

Last Updated : Apr 23, 2021, 5:44 PM IST

ABOUT THE AUTHOR

...view details