ನೆಲ್ಲೂರು( ಆಂಧ್ರಪ್ರದೇಶ): ನೆಲ್ಲೂರು ಜಿಲ್ಲೆಯ ವರಿಕುಂತಪಾಡು ಗ್ರಾಮದ ಮಹಿಳೆಯ ಔದಾರ್ಯಕ್ಕೆ ಬಾಲಿವುಡ್ ನಟ ಸೋನು ಸೂದ್ ಮನ ಸೋತಿದ್ದಾರೆ.
15 ಸಾವಿರ ಹಣ ನೀಡಿದ ಅಂಧ ಮಹಿಳೆ: ಶ್ರೀಮಂತ ಭಾರತೀಯಳು ಎಂದ ಸೋನು ಸೂದ್ - ಸೋನು ಸೂದ್
ಅಂಧ ಮಹಿಳೆಯೊಬ್ಬರು 5 ತಿಂಗಳ ಪಿಂಚಣಿಯಾದ 15,000 ರೂ. ಗಳನ್ನು ಸೋನು ಸೂದ್ ಫೌಂಡೇಶನ್ಗೆ ನೀಡಿದ್ದಾರೆ. ಈ ಹಿನ್ನೆಲೆ ಸೋನು ಸೂದ್ ಅವರು ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟ ಸೋನು ಸೂದ್
ಬೊಡ್ಡು ನಾಗಲಕ್ಷ್ಮಿ ಎಂಬ ಅಂಧ ಮಹಿಳೆ ತನ್ನ 5 ತಿಂಗಳ ಪಿಂಚಣಿಯಾದ 15,000 ರೂ. ಗಳನ್ನು ಸೋನು ಸೂದ್ ಫೌಂಡೇಶನ್ಗೆ ನೀಡಿದ್ದಾರೆ. ಈಕೆ ಯೂಟ್ಯೂಬರ್ ಕೂಡ ಆಗಿದ್ದು, ಇವರ ಕೊಡುಗೆಯನ್ನು ಸೋನು ಸೂದ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶಂಸಿಸಿದ್ದಾರೆ.
ಆಕೆಯನ್ನ "ಶ್ರೀಮಂತ ಭಾರತೀಯಳು" ಎಂದು ಕರೆದಿದ್ದಾರೆ. ಹಾಗೆ ನೋವನ್ನು ನೋಡಲು ಕಣ್ಣುಗಳು ಬೇಕಿಲ್ಲ. ಆಕೆ ನಿಜವಾದ ನಾಯಕಿ ಎಂದು ಗುಣಗಾನ ಮಾಡಿದ್ದಾರೆ.
Last Updated : May 13, 2021, 9:13 PM IST