ಹೈದರಾಬಾದ್:ಕೊರೊನಾ ಸಂಕಷ್ಟ ಕಾಲದಲ್ಲಿ ಬಾಲಿವುಡ್ ನಟ ಸೋನು ಸೂದ್ ಅನೇಕರಿಗೆ ಸಹಾಯ ಮಾಡುವ ಮೂಲಕ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಇದರ ಮಧ್ಯೆ ಯುವಕನೊಬ್ಬ ನಟನ ಬಳಿ ವಿಚಿತ್ರ ಬೇಡಿಕೆ ಇಟ್ಟಿದ್ದು, ಅದಕ್ಕೆ ನಟ ಕೂಟ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
'ಭಾಯ್, ನನ್ನ ಗೆಳತಿಗೆ iPhone ಕೊಡಿಸಿ ಎಂದ ಯುವಕ'; ಸೋನು ಸೂದ್ ಪ್ರತಿಕ್ರಿಯೆ ನೋಡಿ!
ನಟ ಸೋನು ಸೂದ್ ಬಳಿ ಯುವಕನೊಬ್ಬ ವಿಚಿತ್ರ ಬೇಡಿಕೆ ಇಟ್ಟಿದ್ದು, ಇದಕ್ಕೆ ನಟ ಕೂಡ ತಮಾಷೆ ರೀತಿಯಲ್ಲೇ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವೀಟ್ ಮಾಡಿರುವ ನೆಟ್ಟಿಗನೊಬ್ಬ ಬ್ರದರ್, ನನ್ನ ಗರ್ಲ್ಫ್ರೆಂಡ್ ಐಫೋನ್ ಕೇಳುತ್ತಿದ್ದಾಳೆ. ಅದಕ್ಕಾಗಿ ನಿಮ್ಮಿಂದ ಏನಾದರೂ ಸಹಾಯ ಮಾಡಲು ಸಾಧ್ಯವಾಗುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಮಾಷೆಯಾಗಿ ಉತ್ತರ ನೀಡಿರುವ ನಟ ಸೋನು ಸೂದ್, ನಿಮ್ಮ ಗೆಳತಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಒಂದು ವೇಳೆ ಐಫೋನ್ ನೀಡಿದ್ರೆ ಅದರಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.
ಸೋನು ಸೂದ್ ಪ್ರತಿಕ್ರಿಯೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಫೋಸ್ಟ್ ಹೆಚ್ಚಿಗೆ ವೈರಲ್ ಆಗ್ತಿದೆ. ಕೆಲವರು ಐಫೋನ್ ಕೇಳಿರುವ ವ್ಯಕ್ತಿಯನ್ನು ತರಾಟೆಗೆ ಸಹ ತೆಗೆದುಕೊಂಡಿದ್ದಾರೆ.