ಮುಂಬೈ:ಮಹಾಮಾರಿ ಕೊರೊನಾ ವೈರಸ್ ಹಾವಳಿ ವೇಳೆ ಸಾವಿರಾರು ಬಡವರ ಪಾಲಿಗೆ ನಟ ಸೋನು ಸೋದ್ ಆಪದ್ಭಾಂದವರಾಗಿ ಕೆಲಸ ಮಾಡ್ತಿದ್ದಾರೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯದ ವಲಸೆ ಕಾರ್ಮಿಕರಿಗೆ ನೆರವಾಗಿರುವ ನಟ, ತಮ್ಮ ಬಳಿ ಸಹಾಯ ಕೇಳಿಕೊಂಡು ಬಂದವರಿಗೆ ಆಸರೆಯಾಗಿ 'ರಿಯಲ್ ಹೀರೋ' ಆಗಿ ಹೊರಹೊಮ್ಮಿದ್ದಾರೆ.ಇದರ ಮಧ್ಯೆ ಮಗನಿಗೋಸ್ಕರ ಇದೀಗ ಮತ್ತೊಂದು ಮಹತ್ವದ ಕಾರ್ಯ ಮಾಡಿದ್ದಾರೆ.
ಫಾದರ್ಸ್ ಡೇಗೆ ಮಗನಿಗೆ ಗಿಫ್ಟ್ ನೀಡಿದ ನಟ
ಸದ್ಯ ನಾವು ಹೇಳಲು ಹೊರಟಿರುವುದು ಸೋನು ಸೂದ್ ಮಾಡಿರುವ ಸಹಾಯದ ಬಗ್ಗೆ ಅಲ್ಲ. ಬದಲಾಗಿ ಅವರ ಮಗನಿಗೆ ನೀಡಿರುವ ವಿಶೇಷ ಗಿಫ್ಟ್ಗೆ ಸಂಬಂಧಿಸಿದ್ದು. ಹೌದು, ಬರುವ ಭಾನುವಾರ ಪ್ರಪಂಚದಾದ್ಯಂತ 'ಫಾದರ್ಸ್ ಡೇ' ಆಚರಣೆ ಮಾಡಲಾಗ್ತಿದ್ದು, ಮಕ್ಕಳು ತಮ್ಮ ತಂದೆಗೆ ಈ ವೇಳೆ ವಿಶೇಷ ಗಿಫ್ಟ್ ನೀಡುತ್ತಾರೆ. ಆದರೆ, ಇಲ್ಲಿ ಸೋನು ಸೂದ್ ತಮ್ಮ ಮಗ ಆರ್ಯನ್ಗೆ ವಿಶೇಷ ಉಡುಗೊರೆ ನೀಡಿದ್ದಾರೆ ಎನ್ನಲಾಗಿದೆ. ಇದರ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
3 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಕಾರು
ಅದರಲ್ಲಿ ಹೊಸದಾಗಿ ರಿಲೀಸ್ ಆಗಿರುವ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎಸ್600 ಎಸ್ಯುವಿ ಕಾರನ್ನ ಮಗನಿಗೆ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ. ಇದೇ ಕಾರಿನಲ್ಲಿ ಮಗ ಆರ್ಯನ್ ಸೇರಿದಂತೆ ತಮ್ಮ ಕುಟುಂಬದ ಸದಸ್ಯರನ್ನ ಹೊರಗಡೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿರಿ: ರೈತರ ಆಂದೋಲನದ ವೇಳೆ ಯುವಕನಿಗೆ ಮದ್ಯ ಕುಡಿಸಿ ಜೀವಂತ ಸುಟ್ಟರು!
ಇದರ ವಿಡಿಯೋ ತುಣಕವೊಂದು ಇದೀಗ ಯೂಟ್ಯೂಬ್ನಲ್ಲಿ ಹರಿದಾಡ್ತಿದ್ದು, ಸೋನು ಸೂದ್ ತಮ್ಮ ಮಗ ಆರ್ಯನ್ಗೆ ಫಾದರ್ಸ್ ಡೇ ವಿಶೇಷವಾಗಿ ಈ ಕಾರು ಖರೀದಿ ಮಾಡಿ ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. Maybach GLS600 ಕಾರು ಕಳೆದ ವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ಭಾರತದಲ್ಲಿ 50 ಕಾರು ಈಗಾಗಲೇ ಕಾಯ್ದಿರಿಸಲಾಗಿತ್ತು. ಈಗಾಗಲೇ ಎಲ್ಲ ಕಾರುಗಳು ಸೋಲ್ಡ್ ಆಗಿವೆ ಎಂಬ ಮಾಹಿತಿಯನ್ನ ಖುದ್ದಾಗಿ ಕಂಪನಿ ತಿಳಿಸಿದೆ.
ಕಾರಿನ ವಿಶೇಷತೆ ಏನು?
Maybach GLS600 ಕಾರು 12.3 ಇಂಚಿನ ಡಿಜಿಟಲ್ ಎಂಬಿಎಕ್ಸ್ ಇನ್ಫೋಟೇನ್‌ಮೆಂಟ್ ಸಿಸ್ಟಂ, 12.3 ಇಂಚಿನ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಬರ್ಮಿಸ್ಟರ್ ಸರೌಂಡ್ ಸೌಂಡ್ ಸಿಸ್ಟಂ, ಎಲ್ಇಡಿ ಆಪ್ಟಿಕಲ್ ಫೈಬರ್ ಆಂಬಿಯೆಂಟ್ ಲೈಟಿಂಗ್ ಇವೆ. ಐವರು ಕುಳಿತುಕೊಳ್ಳಲು ಆಸನಗಳಿದ್ದು, 9 ಜಿ ಟ್ರೋನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.